Month: February 2023

ಬೆಂಗಳೂರು – ಮೈಸೂರು ದಶಪಥ ಸಂಚಾರಕ್ಕೆ ಟೋಲ್ ಫಿಕ್ಸ್ ಫೆ.28ರಿಂದಲೇ ಸಂಗ್ರಹ ಜಾರಿ

ರಾಮನಗರ: ಬಹು ನಿರೀಕ್ಷಿತ ಬೆಂಗಳೂರು ಮೈಸೂರು ನಡುವಿನ ದಶಪಥ ರಸ್ತೆಯ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿರುವಂತೆಯೇ ಫೆ.28ರ ಮಂಗಳವಾರದಿಂದ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದೆ. ಈ ಸಂಬಂಧ ಅಧಿಕೃತವಾಗಿ ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿ ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ…

ಮಠಾಧೀಶರು ರಾಜಕೀಯಕ್ಕೆ ಬರುವುದು ಅವರ ವೈಯಕ್ತಿಕ ವಿಚಾರ: ಸಚಿವ ಆರ್. ಅಶೋಕ್

ಹುಬ್ಬಳ್ಳಿ, ಫೆಬ್ರವರಿ, 26: ಮಠಾಧೀಶರು ರಾಜಕಾರಣಕ್ಕೆ ಬರೋದು, ಬಿಡೋದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ ರಾಜ್ಯದಲ್ಲಿ ಆ ತರಹದ ವಾತಾವರಣವಿಲ್ಲ. ಇದನ್ನು ಜನರು ಕೂಡ ಒಪ್ಪುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್‌ ಹುಬ್ಬಳ್ಳಿಯಲ್ಲಿ ಹೇಳಿದರು. ನಗರದಲ್ಲಿಂದು ಮಠಾಧೀಶರು ರಾಜಕಾರಣಕ್ಕೆ ಬರುವ ವಿಚಾರವಾಗಿ…

ಸಿಬಿಐನಿಂದ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಬಂಧನ

ನವದೆಹಲಿ, ಫೆಬ್ರವರಿ 26: ನವದೆಹಲಿಯಲ್ಲಿ ಸದ್ಯ ಹಿಂಪಡೆದಿರುವ ಮದ್ಯ ನೀತಿಯಡಿ ಕೇಳಿ ಬಂದ ಭ್ರಷ್ಟಾಚಾರದ ಆರೋಪದ ಮೇಲೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಭಾನುವಾರ ಬಂಧಿಸಿದೆ. ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆಯಿಂದಲೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು…

ಪ್ರಧಾನಿ ಮೋದಿ ಆಗಮನಕ್ಕೆ ಕುಂದಾನಗರಿ ಕಾತರ: ಬೆಳಗಾವಿಗೆ ಮದುವಣಗಿತ್ತಿಯ ಕಳೆ

ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಸೋಮವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಅವರ ಅಭೂತಪೂರ್ವ ಸ್ವಾಗತಕ್ಕೆ ಇಡೀ ಜಿಲ್ಲೆಯ ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಮಲ ಪಾಳೆಯ ಹಬ್ಬೋಪಾದಿಯಲ್ಲಿ ಎಲ್ಲ ಸಿದ್ಧತೆ ಕೈಗೊಂಡಿದೆ. ನರೇಂದ್ರ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ…

ಈ ರಾಜ್ಯದಲ್ಲಿ ನೇಮಕಾತಿ ಪರೀಕ್ಷೆ ಬರೆಯುವಾಗ ಕಳ್ಳಾಟ ಮಾಡಿದರೆ 1 ಕೋಟಿ ರೂ. ಫೈನು, 10 ವರ್ಷ ಜೈಲು!

ಗುಜರಾತ್: ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಮಾಡಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ಗುಜರಾತ್ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ. ಪೇಪರ್ ಸೋರಿಕೆ ಮತ್ತು ಹೆಚ್ಚಿನ ಸಮಸ್ಯೆಗಳನ್ನು ತಡೆಯಲು ಈ ಮಸೂದೆಯನ್ನು ನಿರ್ಮಿಸಲಾಗಿದೆ. ಬಿಲ್‌ನ ನಿಬಂಧನೆಗಳ ಪ್ರಕಾರ ಆರೋಪಿ, ಪರೀಕ್ಷೆಯಲ್ಲಿ…

ನಾನು ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಜಗದೀಶ ಶೆಟ್ಟರ್

ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎಂಬುವುದು ಮಾಧ್ಯಮಗಳಲ್ಲಿನ ಚರ್ಚೆ – ಕಾಂಗ್ರೆಸ್ಸಿನವರಿಗೆ ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ವಿಷಯವಿಲ್ಲ – ಕೊಪ್ಪಳ: ನಾನು ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ವಯಸ್ಸಿನ ಆಧಾರದಲ್ಲಿ ಕೆಲವರಿಗೆ ಟಿಕೆಟ್​…

ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಚೀಲ ಬಳಸಿ ಎಂದು ಮನ್ ಕಿ ಬಾತ್ನಲ್ಲಿ ವಿನಂತಿಸಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ನಾಗರಿಕರಿಗೆ ‘ಪ್ಲಾಸ್ಟಿಕ್‌ ಚೀಲಗಳನ್ನು ಬಟ್ಟು ಬಟ್ಟೆ ಚೀಲಗಳನ್ನು ಬಳಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ’ ಎಂದು ಕೇಳಿಕೊಂಡಿದ್ದು ಇದು ಸ್ವಚ್ಛ ಭಾರತ ಯೋಜನೆಯ ಭಾಗ ಎಂದಿದ್ದಾರೆ.…

7 ವೇತನ ಆಯೋಗ ಜಾರಿಗೆ ಒತ್ತಾಯ :ಬಸವರಾಜ ಮ್ಯಾಗಳಮನಿ

ಗಂಗಾವತಿ :7 ನೇ ವೇತನ ಆಯೋಗ ಹಾಗೂ ಒಪಿಎಸ್ ಜಾರಿ ಒತ್ತಾಯಿಸುವಂತೆ ಬಸವರಾಜ ಮ್ಯಗಳಮನಿ ರವರಿಂದ ಸುದ್ದಿ ಘೋಷ್ಟಿ ನಡೆಸಿದರು . ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ ನೌಕರರ 7 ನೇ ವೇತನ ಆಯೋಗ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದೆ ಆದರೂ…

ಗ್ರಾಮಲೆಕ್ಕಿಗ’ ಇನ್ನು ಮುಂದೆ ‘ಗ್ರಾಮ ಆಡಳಿತ ಅಧಿಕಾರಿ’

ಬೆಂಗಳೂರು, ಫೆಬ್ರವರಿ 26; ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ (Village Administrative Officer) ಎಂದು ಪುನರ್ ಪದನಾಮೀಕರಿಸುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿಯೂ ಆದೇಶಿಸಲಾಗಿದೆ. ಹುದ್ದೆಯ ಪದನಾಮ ಮಾತ್ರ…

ಅರ್ಕಾವತಿ ತಪ್ಪಿತಸ್ಥರು ಜೈಲು ಸೇರುತ್ತಾರೆ: ನಳಿನ್‌

ಲಿಂಗಸೂಗುರು: ಅರ್ಕಾವತಿ ಪ್ರಕರಣದ ತನಿಖೆ ಲೋಕಾಯುಕ್ತಕ್ಕೆ ವಹಿಸಿದ್ದು, ತನಿಖೆ ಬಳಿಕ ತಪ್ಪಿತಸ್ಥರು ಜೈಲು ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಹೇಳಿದರು. ಶನಿವಾರ ವಿಜಯ ಸಂಕಲ್ಪ ಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ…

error: Content is protected !!