ಕೊಪ್ಪಳ :ಜಿಲ್ಲೆ ಅಭಿವೃದ್ಧಿ ಮಾಡಲು ಆಗದೇ ಇದ್ದರೆ ತಕ್ಷಣ ಕುರ್ಚಿ ಖಾಲಿ ಮಾಡಬೇಕೆಂದು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಾರತೀಯ ಪ್ರಜಾ ಸೇನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಕೊಪ್ಪಳ ಜಿಲ್ಲಾ ಸಚಿವರನ್ನು ಆಗ್ರಹಿಸಿದ್ದಾರೆ.
ನೀವು ಎಷ್ಟು ಬಾರಿ ಗೆದ್ದಿದ್ದಿರೋ ಅಷ್ಟು ಬಾರಿ ಸಚಿವರಾಗಿದ್ದಿರಿ ಆದರೂ ಕಾರಟಗಿಯಲ್ಲಿ ಪದವಿ ಕಾಲೇಜು ಪ್ರಾರಂಭ ಮಾಡಲು ಸಾಧ್ಯವಾಗಿಲ್ಲ. ಕಾರಟಗಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾಭ್ಯಾಸ ಮಾಡಲು ಆಸಕ್ತಿ ಇಲ್ಲವೇ, ಅಥವಾ ದಿನ ನಿತ್ಯ ಮೂವತ್ತು ಕಿಲೋಮೀಟರ್ ಪ್ರಯಾಣ ಮಾಡಿ ಪದವಿ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ, ಪರಿಶಿಷ್ಟ ಹಾಗೂ ಹಿಂದುಳಿದ ಅಧಿಕ ವಿದ್ಯಾರ್ಥಿಗಳು ಈ ಕ್ಷೆತ್ರದಲ್ಲಿ ಇದ್ದಾರೆ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ನಿಲಯ ಮಂಜೂರಾತಿ ಮಾಡದಿರುವದು. ಮೀಸಲು ಕ್ಷೆತ್ರವಾಗಿರುವದರಿಂದ ಪsಿಶಿಷ್ಟ ಜನಾಂಗದ ಅಭಿವೃದ್ಧಿಗೆ ವಿಶೇಷವಾಗಿ ಯಾವ ಯೋಜನೆ ರೂಪಿಸಿ ಸೌಲಭ್ಯಗಳನ್ನು ಒದಗಿಸಿದ್ದೀರಿ. ಈ ಕ್ಷೇತ್ರ ಒಣ ಬೇಸಾಯ ಪ್ರದೇಶ ಹೊಂದಿದ್ದು ಗುಳೆ ಹೋಗುವದನ್ನು ತಪ್ಪಿಸಲು ಮಾಡಿರುವ ಕ್ರಮ ಏನು? ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ನಿರುದ್ಯೋಗ ನಿವಾರಣೆಗೆ ಏನಾದರೂ ಪ್ರಯತ್ನ ಮಾಡಿದ್ದೀರಾ. ಕಾರಟಗಿ ಹಾಗೂ ಕನಕಗಿರಿ ಹೊಸ ತಾಲೂಕುಗಳಾಗಿ ಅನೇಕ ವರ್ಷ ಕಳೆದರೂ ಎಲ್ಲಾ ಇಲಾಖೆಗಳು ಪ್ರಾರಂಭ ಆಗಿರುವುದಿಲ್ಲ ಮತ್ತು ಬಸ್ ಡಿಪೋ ಆಗಿಲ್ಲ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಬಸ್ ಗಳು ಇರುವದಿಲ್ಲ.ಸಿದ್ದಾಪುರ ಹೋಬಳಿ ದೊಡ್ಡ ಹೋಬಳಿಯಾಗಿದೆ. ಇಲ್ಲಿ ನಾಡ ಕಚೇರಿಯೂ ಇದೆ. ಪಟ್ಟಣ ಪಂಚಾಯತ್ ಆಗುವ ಲಕ್ಷಣಗಳಿವೆಯಾದರೂ ಪಟ್ಟಣ ಪಂಚಾಯತ್ ಮಾಡಲು ಮುಂದಾಗಿಲ್ಲ.ಸಚಿವರ ಕ್ಷೇತ್ರದಲ್ಲಿಯೇ ಸಾಲು ಸಾಲು ಸಮಸ್ಯೆಗಳು ಇವೆ. ಅದೇರೀತಿ ಸಚಿವರಾಗಿ ಇದ್ದಾರೆ.ನೆಪ ಮಾತ್ರಕ್ಕೆ ಜಿಲ್ಲೆಯ ಸಚಿವರಾಗಿದ್ದಾರೆ.ಗಂಗಾವತಿ ನಗರದಲ್ಲಿ 12 ಇಲಾಖೆಗಳು ಸ್ವಂತ ಕಟ್ಟಡ ಗಳಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಮತ್ತು ಎಲ್ಲಾ ಇಲಾಖೆಯ ವಸತಿ ನಿಲಯಗಳು ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ, ಗುಂಡಮ್ಮ ಕ್ಯಾಂಪಿನಲ್ಲಿರುವ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಗೊಂಡಿರುವ ಸಿಟಿ ಮಾರ್ಕೆಟ್ ಸಾರ್ವಜನಿಕರಿಗೆ ಉಪಯೋಗವಿಲದೇ ಇರುವದು ಸಚಿವರ ಗಮನಕ್ಕೆ ಬಂದಿಲ್ಲವೇ? ಇವೆಲ್ಲವೂಗಳಿಂದ ಸರ್ಕಾರಕ್ಕೆ ಅಪಾರ ಆರ್ಥಿಕ ನಷ್ಟ ಆಗುತ್ತಿದೆ.. ರಾಮ ಜನಿಸಿದ ಸ್ಥಳ ಅಯೋಧ್ಯ ಎಷ್ಟು ಮುಖ್ಯವೋ ಅಷ್ಟೇ ಆಂಜನೇಯ ಜನಿಸಿದ ಸ್ಥಳ ವೂ ಅಷ್ಟೇ ಮುಖ್ಯವಾದದ್ದು. ರಾಮನಷ್ಟೇ ಹನುಮ ಪ್ರಸಿದ್ದಿ ಹೊಂದಿದ್ದಾನೆ.ಮೊನ್ನೆ ನಡೆದ ಹನುಮ ಮಾಲೆ ಕಾರ್ಯಕ್ರಮದಲ್ಲಿ ಸಚಿವರ ಪಾತ್ರ ಏನು? ಆ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಯವರನ್ನು ಅಹ್ವಾನ ಮಾಡಿ ಅಭಿವೃದ್ಧಿಗೆ ಪ್ರಯತ್ನ ಮಾಡುವದರ ಜೊತೆಗೆ ಪ್ರತ್ಯೇಕ ಅಂಜನಾದ್ರಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹಾಗೂ ಆನೆಗುಂದಿ ಭಾಗದಲ್ಲಿರುವ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕಿತ್ತು. ಗಂಗಾವತಿ ನಗರದಲ್ಲಿ ಮೂಲ ಸೌಕರ್ಯಗಳಿಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ ಜನಾಂಗದ ವಸತಿ ಕಲ್ಪಿಸಿಕೊಡುವುದು ನಿಮಗೆ ಸಾಧ್ಯವಾಗಿಲ್ಲ. ಹೀಗೆ ಜಿಲ್ಲೆಯಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಇವುಗಳನ್ನು ಪರಿಹರಿಸಲು ಮುಂದಾಗಿ,ನಿಮ್ಮಿಂದ ಆಗದಿದ್ದರೆ ಮಂತ್ರಗಿರಿ ಕುರ್ಚಿಯನ್ನು ಸ್ವ ಇಚ್ಛೆಯಿಂದ ಖಾಲಿ ಮಾಡಿ, ಇಲ್ಲದಿದ್ದರೆ ಖಾಲಿ ಮಾಡಲು ಹೋರಾಟ ಮಾಡಬೇಕಾಗುತ್ತದೆ ಎಂದು ಮ್ಯಾಗಳಮನಿ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ