ಗಂಗಾವತಿ :ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ ಅವಮಾನ ಪಡೆಸಿದ್ದಾರೆ.ಅಮಿತ್ ಶಾ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಮಂತ್ರಿಯಾಗಿ ಸಂವಿಧಾನ ಪಿತಾ ಪರಮ ಪೂಜ್ಯ ಬಾಬಾಸಾಹೇಬ್ ಅವರ ಬಗ್ಗೆ ನಗಣ್ಯ ರೀತಿಯಲ್ಲಿ ವ್ಯಾಖ್ಯಾನಿಸಿ ಮಾತನಾಡಿರುವುದರಿಂದ ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವವಾದಿಗಳು ಮತ್ತು ಅಂಬೇಡ್ಕರ್ ಅಭಿಮಾನಿಗಳಿಗೆ ಮಾನಸಿಕವಾಗಿ ಬಹಳ ನೋವುಂಟು ಮಾಡಿದ್ದಾರೆ. ಅಲ್ಲದೇ ಇವರ ಹೇಳಿಕೆಯು ಡಾ.ಅಂಬೇಡ್ಕರ್ ವಿರೋಧಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಅಮಿತ್ ಶಾ ತಾನೊಬ್ಬ ಮೇಲ್ ಜಾತಿ ಅವನೆಂಬ ದುರಹಂಕಾರದಿಂದ ಇಂಥ ಹೇಳಿಕೆ ಕೊಡಲು ಸಾಧ್ಯವಾಗಿದೆ.
ಆದುದರಿಂದ ಜಗತ್ತಿನ ಎಲ್ಲಾ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ನಡೆಸಿದೆ.
ಶಂಕರ ಸಿದ್ದಾಪುರ ವಕೀಲರು
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ
ಈ ಸಂದರ್ಭದಲ್ಲಿ ರಮೇಶ್ ಕಾಳಿ ಭೀಮಪ್ಪ ಮೈಲಾಪುರ್ ಹೊನ್ನೂರ್ ಸಿದ್ದಾಪುರ ಅಯ್ಯಪ್ಪ
ಮೈಲಾಪುರ್ ಭೀಮರಾಯ ಕಾಟಪುರ್ ಸುಮಂತ್ ಇನ್ನು ಅನೇಕ ಕಾರ್ಯಕರ್ತರಿದ್ದರು