ರಾಮನಗರ: ಬಹು ನಿರೀಕ್ಷಿತ ಬೆಂಗಳೂರು ಮೈಸೂರು ನಡುವಿನ ದಶಪಥ ರಸ್ತೆಯ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿರುವಂತೆಯೇ ಫೆ.28ರ ಮಂಗಳವಾರದಿಂದ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದೆ.

ಈ ಸಂಬಂಧ ಅಧಿಕೃತವಾಗಿ ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿ ಬಳಿಯ ಕಣಿಮಿಣಿಕೆ ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಬಳಿ ಟೋಲ್ ಸಂಗ್ರಹ ನಡೆಯಲಿದ್ದು, ,ಮಂಡ್ಯ ಜಿಲ್ಲೆ ಮದ್ದೂರಿನ ನಿಢಘಟ್ಟವರೆಗೆ 55.63 ಕಿಮೀ ಉದ್ಧದ ರಸ್ತೆಗೆ ಟೋಲ್ ಶುಲ್ಕವನ್ನು ನಿಗಧಿ ಮಾಡಿದ್ದು, ಈ ಸಂಬಂಧ ಎನ್.ಎಚ್ 275ರ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 8ಗಂಟೆಯಿಂದಲೇ ಟೋಲ್ ಸಂಗ್ರಹ ಆರಂಭವಾಗಲಿದ್ದು, ಇಲ್ಲಿಯವರೆಗೆ ಉಚಿತವಾಗಿ ಓಡಾಟ ನಡೆಸುತ್ತಿದ್ದ ವಾಹನಗಳು ಕಡ್ಡಾಯವಾಗಿ ಟೋಲ್ ತೆರಲೇಬೇಕಿದೆ.

ಹೆದ್ದಾರಿ ಪ್ರಾಧಿಕಾರ ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿದ್ದು, ಸರ್ವೀಸ್ ರಸ್ತೆ ಹೊರತು ಪಡಿಸಿ, ಉಳಿದ ಆರು‌ ಪಥಗಳಿಗೆ ಶುಲ್ಕ ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 4525ರೂ. ನಿಗಧಿಪಡಿಸಿದೆ.

ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ಗಳ ಏಕಮುಖ ಸಂಚಾರಕ್ಕೆ 220 ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ. ಸ್ಥಳೀಯ ವಾಹನಗಳಿಗೆ 110 ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 7315ರೂ ಇದೆ.

ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್) ಏಕಮುಖ ಸಂಚಾರಕ್ಕೆ 460 ರೂ. ಅದೇ ದಿನ ಮರು ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230 ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 15325 ರೂ.

ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್) ಏಕಮುಖ ಸಂಚಾರಕ್ಕೆ 500 ರೂ. ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250 ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 16715 ರೂ.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನಗಳು, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 24030 ರೂ.

ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್) ಏಕಮುಖ ಸಂಚಾರಕ್ಕೆ 880ರೂ. ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 29255ರೂ.

ಇದರ ಜೊತೆಗೆ ಬಳಕೆ ಆಧಾರಿತ ಟೋಲ್ ರಿಯಾಯಿತಿಯನ್ನು ಸಹ ನೀಡಲಾಗಿದ್ದು, ನಿಗಧಿತ ಭಾರಕ್ಕಿಂತ ಹೆಚ್ಚಿನ ಭಾರದೊಂದಿಗೆ ಸಂಚರಿಸುವ ವಾಹನಗಳ ಮೇಲೆ ದಂಡ ಪ್ರಯೋಗವೂ ನಡೆಯಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದೆ.

error: Content is protected !!