ಗಂಗಾವತಿ :ದಿನಾಂಕ 24.12.2024 ರಂದು ಗಂಗಾವತಿ ಶಹರದಲ್ಲಿ ಅಬಕಾರಿ ನಿರೀಕ್ಷಕರಾದ ವಿಠಲ ಪಿರಗಣ್ಣವರ ಇವರ ನೇತೃತ್ವದಲ್ಲಿ ರಾತ್ರಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಬಂದ ಬಾತ್ಮೀಯ ಮೇರೆಗೆ ಶಹರದ ಸಿ.ಬಿ.ಎಸ್ ಸರ್ಕಲ್ ನಲ್ಲಿರುವ ಸನ್ಮಾನ್ ಬಾರ್ ಹತ್ತಿರದ ಕರ್ನಾಟಕ ಎ.ಟಿ.ಎಂ. ಮುಂಭಾಗದ ರಸ್ತೆಯಲ್ಲಿ ಇಮ್ಮಿಯಾಜ್ ತಂದೆ ಮೈಬೂಬ್ ಪಾಷಾ ಓಣಬಾಳ ಸಾ:ಕೃಷ್ಣಗಿರಿ ಕಾಲೋನಿ, ವಾ:01. ಕುಷ್ಟಗಿ ಪಟ್ಟಣ. ಹಾಲಿ ವಸ್ತಿ ಮುರಾರಿ ನಗರ, 21ನೇ ವಾರ್ಡ ಗಂಗಾವತಿ. ಈತನು ಹಸಿ ಗಾಂಜಾ ಎಲೆ, ಗಾಂಜಾ ಹೂ ಮಿಶ್ರಿತ 198 ಗ್ರಾಂ ಹಸಿ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾದಲ್ಲಿ ಹೊಂದಿದಾಗ ಅಬಕಾರಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದು, ಆರೋಪಿತನ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಘೋರ ಪ್ರಕರಣ ದಾಖಲಿಸಿ, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ. ದಾಳಿಯಲ್ಲಿ ನಾಗರಾಜ ಪಿ ಅ.ಅ ಕೊಪ್ಪಳ, ಶಂಕರ ಗುಡದಾರ ಅ.ನಿ ಉ.ವಿ ಕೊಪ್ಪಳ, ಗಂಗಾವತಿ ವಲಯದ ವಿಜಯಕುಮಾರ ರೆಡ್ಡಿ ಅ.ಉ.ನಿ. ಸಿಬ್ಬಂದಿಯಾದ ವಿಜಯಕುಮಾರ ನಾಯ್ಕ ಅ.ಮು.ಪೇ ಹಾಗೂ ಇಬ್ಬರು ಸರಕಾರಿ ಪಂಚರು ಹಾಜರಿದ್ದರು.