ದೆಹಲಿಯ ಎಂ ಸಿ ಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅಭೂತಪೂರ್ವ ಗೆಲುವನ್ನು ಸಾಧಿಸಿದ್ದ ರಿಂದ ಗಂಗಾವತಿಯ ಕೃಷ್ಣದೇವರಾಯ ವೃತದಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು, ಈ ವಿಜಯೋತ್ಸವದಲ್ಲಿ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಮಾತನಾಡಿ ಇದು ಮೋದಿಯ ಸಾವಿರ ಕುತಂತ್ರ ಗಳಿಗೆ ದೆಹಲಿಗೆ ಜನತೆ ನೀಡಿದ ಉತ್ತರ, ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಗುಜರಾತ್ ಮತ್ತು ದೆಹಲಿಯ ಎಂ ಸಿ ಡಿ ಚುನಾವಣೆಗಳು ಏಕಕಾಲಕ್ಕೆ ನಡೆಯುವಂತೆ ಮಾಡುವ ಮೂಲಕ ಕುತಂತ್ರ ಮಾಡಿದ ಮೋದಿ ಗೆ  ದೆಹಲಿಯ ಜನತೆ ತಮ್ಮ ಸ್ಪಷ್ಟ ಸಂದೇಶ ವನ್ನು ನೀಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಅನ್ನು ಸೋಲಿಸುವ ಶಕ್ತಿ  ಇದೆ ಮತ್ತು ಬಿಜೆಪಿಯನ್ನು ಕೂಡ ಸೋಲಿಸುವ ಶಕ್ತಿ ಇದೆ ಎಂದು ಈ ಚುನಾವಣೆ ಸಾಬೀತು ಪಡಿಸಿದೆ ಎಂದರು, ಇದಕ್ಕೆ ಕಾರಣರಾದ ದೆಹಲಿ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜೀಹೊಲ ಮಾತನಾಡಿ  ಬೆಲೆ ಏರಿಕೆಯನ್ನೇ ಕೊಡುಗೆಯಾಗಿ ನೀಡುತ್ತಿರುವ ಭ್ರಷ್ಟ ಬಿಜೆಪಿಗೆ ದೆಹಲಿಯ ಜನಸಾಮಾನ್ಯರು ಪೊರಕೆಯ ಏಟು ಕೊಟ್ಟಿದ್ದಾರೆ.

ಆ ಮೂಲಕ ಮೋದಿಯ ತಂತ್ರಗಾರಿಕೆ ಗೆ ದೆಹಲಿಯಲ್ಲಿ ಸಂಪೂರ್ಣ ಇತಿಶ್ರೀ ಹಾಡಿದ್ದಾರೆ-ಎಂದರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ಕಳೆದ 15 ವರ್ಷಗಳಿಂದ ದೆಹಲಿಯ ನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಭ್ರಷ್ಟಾಚಾರದಿಂದ ಹೆಸರುವಾಸಿಯಾಗಿ ಚುನಾವಣಾ ಆಯೋಗವನ್ನ ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತ ಬಂದಿದ್ದು ಇದರಿಂದ ರೋಸಿ ಹೋದ ದೆಹಲಿಯ ಜನತೆ ದೆಹಲಿಯ ಎಂಸಿಡಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಮೋದಿಗೆ ಮುಖ ಭಂಗ ಉಂಟು ಮಾಡಿದ್ದಾರೆ ಎಂದರು.

ನಗರ ಘಟಕದ ಅಧ್ಯಕ್ಷರಾದ ಪರಶುರಾಮ ಒಡೆಯರ್ ಮಾತನಾಡಿ ದೆಹಲಿಯ ಎಂಸಿಡಿಯ ಗೆಲುವು ಜನ ವಿರೋಧಿ ನೀತಿಯ ವಿರುದ್ಧ ಜನಪರ ನೀತಿಯ ಗೆಲುವು- ಎಂದರು, ವಿಕ್ರಮ್ ಅವರು ಮಾತನಾಡಿ ಮಾನ್ಯ ಮೋದಿಯವರು ಮತದಾನದ ಸಂದರ್ಭದಲ್ಲಿ ತಮ್ಮೊಂದಿಗೆ  ತಮ್ಮದೇಗುಂಪು ಕಟ್ಟಿಕೊಂಡು ಕಾನೂನು ಉಲ್ಲಂಘನೆ ಮಾಡಿ ಮತದಾನ ಮಾಡಿದ್ದು ಖಂಡನೀಯ, ಮೋದಿ ಅವರ ನೀತಿ ಜನಸಾಮಾನ್ಯರಿಗೆ ಯಾವಾಗಲೂ ಅಹಿತಕಾರಿಯೇ, ಬಿಜೆಪಿಯ ಸೋಲು ತಪ್ಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗವನ್ನು ಬಳಸಿಕೊಂಡರೂ ಕೂಡ ಕೊನೆಗೆ ಚುನಾವಣೆಯಲ್ಲಿ ಸೋಲು ಉಣ್ಣಬೇಕಾಯಿತು.-ಎಂದು ಕಿಡಿ ಕಾರಿದರು,

ಅದೇ ರೀತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ  ರೇಣುಕಾ ಬಸವರಾಜ್, ಚಂದ್ರು ನಿಸರ್ಗ, ಟಿಪ್ಪು ಭಾಯ್, ಶರೀಫ್ ಸಾಬ್ ಮಾತನಾಡಿ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು, ಈ ಸಂದರ್ಭದಲ್ಲಿ ರಾಘವೇಂದ್ರ ಕಡೆ ಬಾಗಿಲು, ಬಸವರಾಜ್, ಭೋಗೇಶ್ ಆನೆಗುಂದಿ ,ಗಣೇಶ್, ಬಸಮ್ಮ, ದ್ರಾಕ್ಷಾಯಿಣಿ ,ಭುವನೇಶ್ವರಿ, ಭಾಸ್ಕರ್, ರಾಘವೇಂದ್ರ ಸಿದ್ದಿಕೆರೆ, ಮಂಜುನಾಥ್ ಬಡಿಗೇರ್, ಶಿವು ಅರಾಳ, ನಾಗರಾಜ್, ಎಸಿ ಘಟಕದ ಅಧ್ಯಕ್ಷ ಹನುಮೇಶ ಭೋವಿ, ಖಾಜಾ ಭಾಯ್, ದಸ್ತಗಿರಿ ಆಟೋ, ದುರ್ಗೇಶ್ ಇತರರು ಭಾಗವಹಿಸಿದ್ದರು.

error: Content is protected !!