ಕುಕನೂರು: ರಾಜಕೀಯದಲ್ಲಿ ಜಾತಿ ಬಲ, ಹಣ ಬಲವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ನಿಜಕ್ಕೂ ಶೋಚನೆಯ. ಮತದಾರರಿಗೆ ಕುಂಕುಮ ಹಚ್ಚಿ, ಧರ್ಮದ ಹೆಸರು ಹೇಳಿಕೊಂಡು ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದರು.
ತಾಲೂಕಿನ ಬಳಗೇರಿ, ಕಕ್ಕಿಹಳ್ಳಿ ಹಾಗೂ ದ್ಯಾಂಪೂರ ಗ್ರಾಮದಲ್ಲಿ ನಡೆದ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನೆಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಧರ್ಮ,ದೇವರು ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ಕಾಂಗ್ರೇಸ್ ಕೊಡುಗೆ ಅಪಾರವಾಗಿದೆ, ದೇಶದಲ್ಲಿ ಮೂಲಭೂತ ಸೌಕರ್ಯಗಳು ಒದಗಿಸಲು ಸಾಕಷ್ಟು ಶ್ರಮವಹಿಸಿದೆ. ಆದರೆ ಬಿಜೆಪಿಯವರಿಗೆ ಸಾಮಾನ್ಯ ಜನರ ಕಷ್ಟಗಳು ತಿಳಿಯುತ್ತಿಲ್ಲ ದಿನ ಬಳಕೆಯ ವಸ್ತುಗಳು ಗಗನಕ್ಕೆ ಏರುತ್ತಿದ್ದರು ಸಹ ಬಿಜೆಪಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸಾಮನ್ಯ ಜನರು ಪ್ರಶ್ನೆ ಮಾಡಿದರೆ ಅವರಿಗೆ ಧರ್ಮದ ಪಟ್ಟ ಕಟ್ಟಿ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿದ್ದರು ಸಚಿವರು ಮೌನವಾಗಿದ್ದಾರೆ ಯಾಕೆಂದರೆ ಅವರು ಕಮಿಷನ್ ಹಣ ಪಡೆಯುತ್ತಿದ್ದಾರೆ ಹೀಗಾಗಿ ಅವರಿಗೆ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವ ನೈತಿಕ ಜವಬ್ದಾರಿ ಹೊತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಂಕಣ್ಣ ಯರಾಶಿ, ಹನಮಂತಗೌಡ ಪಾಟೀಲ, ಹನಮಂತಗೌಡ ಚೆಂಡೂರು, ಬಸವರಾಜ ಉಳ್ಳಾಗಡ್ಡಿ, ಮಂಜುನಾಥ ಕಡೇಮನಿ, ಬಸವರಾಜ ಮಾಸೂರು, ದಾನರಡ್ಡಿ, ಸಂಗಮೇಶ ಗುತ್ತಿ, ರಹಿಮಾನಸಾಬ ಮಕಪ್ಪನವರ, ಗಗನ್ ನೋಟಗಾರ್, ಈಶಯ್ಯ ಶಿರೂರಮಠ, ಯಮನೂರಪ್ಪ ಕಕ್ಕಿಹಳ್ಳಿ, ಸುರೇಶ ಸದರಿ, ಸಂಗಪ್ಪ ನೋಟಗಾರ, ದೇವಪ್ಪ ಮರಡಿ, ವಿಜಯರಡ್ಡಿ ರಡ್ಡೇರ, ಹಾಗು ಗ್ರಾಮದ ಇತರರಿದ್ದರು.