ಗಂಗಾವತಿ :ಇಂದು ಗುಜರಾತ ರಾಜ್ಯದಲ್ಲಿ‌ ಭಾರತೀಯ ಜನತಾ ಪಕ್ಷದ ಮಹೊನ್ನತ ಗೆಲುವಿನ ಸಂಭ್ರಾಮಾಚರಣೆಯನ್ನ ಗಂಗಾವತಿ ನಗರದ ಗಾಂಧಿ ವೃತ್ತದಲ್ಲಿ, ಮಹಾತ್ಮ ಗಾಂಧಿಜಿ ಅವರ ಪುತ್ಥಳಿಗೆ ಮಾಲೆ ಹಾಕಿ, ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಆಡಳಿತ ವಿರೋಧಿ ಅಲೆ ಇದೆ ಈ ಬಾರಿ ಗುಜರಾತಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲ್ಲ ಎಂದು ಹೇಳಿದ ಕಾಂಗ್ರೆಸ್ ನವರು ಇಂದು ಅಧಿಕೃತ ವಿರೋಧ ಪಕ್ಷ ಆಗುವಲ್ಲಿ ಕೂಡ ವಿಫಲವಾಗಿದೆ ಎಂದು ಮಾಜಿ ಕಾಡ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಯವರು ವಿಶ್ಲೇಷಿಸಿದರು.

ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರನ್ನು ರಾವಣನಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದವರಿಗೆ ಗುಜರಾತಿನ ಚುನಾವಣಾ ಫಲಿತಾಂಶ, ನಾವು ರಾಮಮಂದಿರ ಕಟ್ಟಿದ ಪಕ್ಷ ಎಂದು ಸಾಬೀತು ಮಾಡಿದೆ ಎಂದು ನಗರ ಮಂಡಲ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾದ ಚನ್ನವೀರನಗೌಡ ಕೋರಿ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷರಾದ ಯಮನೂರ ಚೌಡ್ಕಿ ಜಿಲ್ಲಾ ಎಸ್.ಟಿ ಮೋರ್ಚ ಪ್ರಧಾನ ಕಾರ್ಯದರ್ಶಿ ರಮೇಶ ಹೊಸಮಲಿ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ರಾಧ ಉಮೇಶ, ನಗರಸಭೆ ಸದಸ್ಯರಾದ ಉಮೇಶ‌ ಸಿಂಗನಾಳ, ನೀಲಕಂಠ ಕಟ್ಟಿಮನಿ, ಪ್ರಮುಖರಾದ ವೀರೇಶ ಬಲಕುಂದಿ, ಡಾ. ಜಿ.ಡಿ ಅಮರಗುಂಡಪ್ಪ, ರಾಜೇಶ ಪಾಟೀಲ, ಶಾಂತಮಲ್ಲಯ್ಯ ಸ್ವಾಮಿ, ಯು. ಲಕ್ಷ್ಮಣಪ್ಪ, ಹುಸೇನಪ್ಪ ಸ್ವಾಮಿ, ಟಿ.ಆರ್ ರಾಯಬಾಗಿ ಸಿದ್ದಲಿಂಗಯ್ಯ ಗಡ್ಡಿಮಠ, ದೇವು ಸಂಗಾಪುರ, ನಗರ ಎಸ್.ಸಿ ಮೋರ್ಚ ಅಧ್ಯಕ್ಷರಾದ ಬಸವರಾಜ, ನಗರ ಎಸ್.ಟಿ ಮೋರ್ಚ ಅಧ್ಯಕ್ಷರಾದ ಮಂಜುನಾಥ ಕೋಲ್ಕಾರ್, ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಶ್ರೀಮತಿ ರೇಖಾ ರಾಯಬಾಗಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂಗಯ್ಯ ಸಂಶಿಮಠ, ಶ್ರೀನಿವಾಸ ಧೂಳ ‌ಹಾಗೂ ಸಮಸ್ತ ಕಾರ್ಯಕರ್ತರು‌ ಉಪಸ್ಥಿತರಿದ್ದರು.

error: Content is protected !!