ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ಇದರ ಗಂಗಾವತಿ ತಾಲೂಕ್ ಶಾಖೆ ಕಾರ್ಯಕಾರಿ ಸಮೀತಿ ಸದಸ್ಯರ ಚುನಾವಣೆ
ಗಂಗಾವತಿ :2024-25ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ಇದರ ಗಂಗಾವತಿ ತಾಲೂಕ್ ಶಾಖೆ ಕಾರ್ಯಕಾರಿ ಸಮೀತಿ ಸದಸ್ಯರ ಚುನಾವಣೆ -2024-25 ರ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಡುವೆ ಬಹಳ ಜಿದ್ದಾ ಜಿದ್ದಿ ಏರ್ಪೋಟಿತ್ತು ಕೊನೆಗೆ ಚುನಾವಣೆ ಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶ್ರೀನಿವಾಸ್ನಾಯಕ 56 ಮತಗಳನ್ನು ಪಡೆದು ಜಯವನ್ನು ಸಾಧಿಸಿದರು.


2024-25ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ಇದರ ಗಂಗಾವತಿ ತಾಲೂಕ್ ಶಾಖೆ ಕಾರ್ಯಕಾರಿ ಸಮೀತಿ ಸದಸ್ಯರ ಚುನಾವಣೆ -2024-25 ರ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮತದಾರರ ಪಟ್ಟಿಯಲ್ಲಿ 16 ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು, ಹಿರೇಬೆಣಕಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹಿರೇಬೆಣಕಲ್ ಮತ್ತು ಅಲ್ಪಸಂಖ್ಯಾತರ ಮೌಲಾನ ಆಜಾದ್ ಮಾದರಿ ಶಾಲೆ, ಗಂಗಾವತಿ ಯಲ್ಲಿ ಕಾರ್ಯನಿರ್ವಹಿಸುತ್ತಿರು ಖಾಯಂ ಸಿಬ್ಬಂದಿಗಳು ಮತದಾನ ಮಾಡಲು ಅರ್ಹರಿದ್ದು, ಸದರಿ 16 ನೌಕರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದರಿಂದ, ದಿನಾಂಕ: 23/10/2024 ರಂದು ಮೊರೆ ಹೋಗಿರುತ್ತಾರೆ. ಎಲ್ಲಾ ದಾಖಲೆಗಳು ಮತ್ತು ಸನ್ನಿವೇಷಗಳನ್ನು ಪರಿಶಿಲಿಸಿ ಮಾನ್ಯ ಉಚ್ಚ ನ್ಯಾಯಲಯ ಧಾರವಾಡ ಪೀಠ ರವರು ದಿನಾಂಕ:25/10/2024 ರಂದು ಮಧ್ಯಾಂತರ ಆದೇಶ ಹೊರಡಿಸಿ ಸದರಿ 16 ನೌಕರನ್ನು ಮತದಾನ ಮಾಡಲು ಅವಕಾಶ ಕಲ್ಪಿಸಿರುತ್ತಾರೆ ಹಾಗೂ ಇವರ ಮತದಾನವನ್ನು ಪ್ರತ್ಯೇಕ ಬ್ಯಾಲೆಟ್ ಬಾಕ್ಸನಲ್ಲಿ ಇರಿಸಿ ಫಲಿತಾಂಶವನ್ನು ಮುಂದಿನ ಆದೇಶದವರೆಗೆ ಪ್ರಕಟಿಸಿದಂತೆ ತಡೆದಿರುತ್ತಾರೆ.
ತಾಲೂಕ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ಹಾಗೂ ಚುನಾವಣೆ ಅಧಿಕಾರಿ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ರವರಿಗೆ ನೋಟಿಸ್ ರವಾನಿಸಿ ಅರ್ಹ ಸರ್ಕಾರಿ ನೌಕರರನ್ನು ಚುನಾವಣ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ದಿನಾಂಕ 14/11/2024 ರೊಳಗೆ ಉಚ್ಚ ನ್ಯಾಯಾಲಯದಲ್ಲಿ ಕಾರಣ ನೀಡಲು ಸೂಚಿಸಿರುತ್ತಾರೆ. ಅದ್ದರಿಂದ, ತಾಲೂಕ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ಹಾಗೂ ಚುನಾವಣೆ ಅಧಿಕಾರಿ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ತಾಲೂಕು ಶಾಖೆ ಗಂಗಾವತಿ, ಕೊಪ್ಪಳ ಜಿಲ್ಲೆ ರವರು ದಿನಾಂಕ: 05/11/2024 ರಂದು ಮಾನ್ಯ ಉಚ್ಚ ನ್ಯಾಯಲಯ ಧಾರವಾಡ ಪೀಠ ರಲ್ಲಿ ಹಾಜರಾಗಿ ಸದರಿ 16 ನೌಕರರ ಹೆಸರುಗಳು ಮಾನವ ದೋಷದಿಂದ ಕೈಬಿಟ್ಟಿರುತ್ತಾರೆ ಮತ್ತು ಇವರ ಮತಗಳನ್ನು ಅಂತಿಮ ಫಲಿತಾಂಶಕ್ಕೆ ಪರಿಗಣ ಸುವುದಲ್ಲಿ ಯಾವುದೇ ಆಭ್ಯಂತರ ಇಲ್ಲ ವೆಂದು ಒಪ್ಪಿರುತ್ತಾರೆ.
ಉಚ್ಚ ನ್ಯಾಯಾಲಯ, ಧಾರವಾಡ ಪೀಠ ರವರು ದಿನಾಂಕ 6/11/2024 ರಂದು ಹೊರಡಿಸಿದ ಅಂತಿಮ ಆದೇಶದ ಮೇರೆಗೆ ಪ್ರತ್ಯೇಕ ಬ್ಯಾಲೆಟ್ ಬಾಕ್ಸಲ್ಲಿನ ಮತಗಳನ್ನು ಪರಿಗಣ ಸಿದಾಗ ಶ್ರೀ ಶ್ರೀನಿವಾಸ ನಾಯಕ ನಿಲಯಪಾಲಕರು ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿನಿಲಯ, ಗಂಗಾವತಿ ಹಾಗೂ ಪ್ರಭಾರಿ ತಾಲೂಕ ವಿಸ್ತರಣಾಧಿಕಾರಿಗಳು, ತಾಲೂಕ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಇವರು ಮೊದಲನೆ ಬ್ಯಾಲೆಟ್ ಬಾಕ್ಸಲ್ಲಿನ 71 ಮತಗಳಲ್ಲಿ 41 ಮತಗಳನ್ನು ಪಡೆದಿರುತಾರೆ ಮತ್ತು ಪ್ರತ್ಯೇಕ ಬ್ಯಾಲೆಟ್ ಬಾಕ್ಸಲ್ಲಿನ 16 ಮತಗಳಲ್ಲಿ 15ಮತಗಳನ್ನು ಪಡೆದು ಒಟ್ಟು 86 ಮತಗಳಲ್ಲಿ 56 ಮತಗಳನ್ನು ಪಡೆದು ನಿರ್ದೇಶಕರ ಸ್ಥಾನವನ್ನು ಗೆದ್ದಿರುತ್ತಾರೆ ಹಾಗೂ ಪ್ರತಿಸ್ಪರ್ಧೆಯಾದ ಮಲ್ಲಿಕಾಜುರ್ನ್ ನಿಲಯಪಾಲಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗಂಗಾವತಿ ರವರು 30 ಮತಗಳನ್ನು ಪಡೆದು ಪರಜಯಗೊಂಡಿರುವರು ಎಂದು ಚುನಾವಣೆಯಧಿಕಾರಿಗಳು ಘೋಶಿಸಿರುತ್ತಾರೆ.