ವಿಜಯಪುರ: 2023ನೇ ಜನೆವರಿ 6 ಮತ್ತು 7ರಂದು ಹಾವೇರಿಯಲ್ಲಿ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯಕ್ತ ಡಿ 7ರಂದು ಕನ್ನಡದ ರಥ ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿದ್ದೂ ಅದರ ಪೂರ್ವಬಾವಿಯಾಗಿ ಇಂದು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಕ.ಸಾ.ಪ.ಅಧ್ಯಕ್ಷ ರಾಜಶೇಖರ ಕುಚಬಾಳ ಮಾತನಾಡಿ ಸೋಮವಾರ ಕನ್ನಡ ರಥವು ವಿಜಯಪುರ ಜಿಲ್ಲೆಯಿಂದ ಆಗಮಿಸಿ ದೇವರ ಹಿಪ್ಪರಗಿಯಿಂದ ಬುಧವಾರ ಸಿಂದಗಿ ನಗರಕ್ಕೆ ಮಧ್ಯಾಹ್ನ 12ಕ್ಕೆ ಕನ್ನಡ ರಥವೂ ಆಗಮಿಸಲಿದ್ದು ಜಾಥಾ ವನ್ನು ಸ್ವಾಗತಿಸಲು ವಿವಿಧ ಕನ್ನಡಪರ ಸಂಘಟನೆಗಳು ಕನ್ನಡಪರ ಸಾಂಸ್ಕೃತಿಕ ಸಂಘಟನೆಗಳು ನಗರದ ನೃತ್ಯ ಗಾನಗಳ ಹಾಗೂ ಇನ್ನಿತರ ಸಂಘಗಳು ಸಹ ಭಾಗಿಯಾಗಲಿದ್ದು ಎಲ್ಲ ಕನ್ನಡ ಮನಸುಗಳು ಕನ್ನಡಾಭಿಮಾನಿಗಳು ಒಂದಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿ ಕಾರ್ಯಕ್ರಮದಲ್ಲಿ ನೃತ್ಯ ಗಾನ ಮೆರವಣಿಗೆಯ ಮೂಲಕ ಕನ್ನಡ ರಥಕ್ಕೆ ಸ್ವಾಗತ ಮಾಡೋಣ ಎಂದು ಹೇಳಲಾಯಿತು.