ಕಳಪೆ ಕಾಮಗಾರಿಯ ಬಗ್ಗೆ ಅಧಿಕಾರಿಗಳು ಗಮನಹರಿಸಿ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಹಾಗೂ ಕಾಮಗಾರಿ ಕಳಪೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿರೂರು ಗ್ರಾಮದ ಗ್ರಾಮಸ್ತರು ಒತ್ತಾಯಿಸಿದರು.
ತಾಲೂಕಿನ ಶಿರೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಹೊಸ ಊರಿನಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಮಾಡಲಾಗುತ್ತಿದ್ದೆ.ಆದರೆ ಈ ಕಾಮಗಾರಿಯುನ್ನು ಸರಿಯಾದ ರೀತಿಯಲ್ಲಿ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಮಸ್ತರು ಆರೋಪಿಸುತ್ತಿದ್ದಾರೆ.

ಗುತ್ತಿಗೆದಾರರು ಎಲ್ಲೋ ಕುಳಿತು ಇಲ್ಲಿ ಕೆಲಸ ಮಾಡುಸುತ್ತಿದ್ದಾರೆ. ಆದರೆ ಇಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರು ನಿರ್ಮಾಣವಾದ ಕಾಮಗಾರಿಗಳಿಗೆ ಸರಿಯಾಗಿ ನೀರು ಹಾಕುತ್ತಿಲ್ಲ. ಹೀಗಾಗಿ ಕಾಮಗಾರಿ ಗುಣಮಟ್ಟ ಕಳೆದುಕೊಳ್ಳುತ್ತಿವೆ ಅಲ್ಲದೇ ಗ್ರಾಮದ ತುಂಬೆಲ್ಲಾ ಬೇಗಾಬಿಟ್ಟುಯಾಗಿ ರಸ್ತೆ ಅಗೆದಿದ್ದಾರೆ ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಎಂದು ಗ್ರಾಮಸ್ತರು ಆಕ್ರೋಶ ವ್ಯಕ್ತಪಡಿಸಿ ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟವನ್ನು ಕಾಪಡಬೇಕು ಎಂದರು.

ವೀರೆಶ ಹುಬ್ಬಳ್ಳಿ, ವೀರಪ್ಪ ಕಡಗತ್ತಿ, ಈರಣ್ಣ ಹಾಳಕೇರಿ, ಸುರೇಶಗೌಡ ಹಾಳಕೇರಿ, ಶಿವಪ್ಪ ಮಡಿವಾಳರ, ಹನಮಂತಗೌಡ ಮಾಲಿಪಾಟೀಲ, ರಾಜೇಸಾಬ ಅಂಗಡಿ, ಕಳಕಪ್ಪ ಗದ್ದಿ, ಶರಣಪ್ಪ ಮಾಲಿಪಾಟೀಲ, ಮುದಿಯಪ್ಪ ಅಂಗಡಿ, ಗ್ಯಾನಪ್ಪ ಕಡಗತ್ತಿ ಹಾಗು ಇತರರಿದ್ದರು.