ಕುಕನೂರು- ಕಾಲ ಮಿತಿಯೋಳಗೆ ಮಾಹಿತಿ ದಾಖಲೆ ದೃಢೀಕರಿಸಿ ನೀಡದ ಹಿನ್ನೆಲೆಯಲ್ಲಿ ಕುಕನೂರು ತಾಲೂಕಿನ ಬಳಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಚಂದುಸ್ವಾಮಿ ದೊಡ್ಡಮನಿ ಅವರಿಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ 25000 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ತಾಲೂಕಿನ ಇಟಗಿ ಗ್ರಾಮದ ನಿವಾಸಿ (ಹಾಲಿ ವಸ್ತಿ ಹರಿಶಂಕರಬಂಡಿ) ಮಾಜಿ ಸೈನಿಕ ಹಾಗೂ ಸಾಮಾಜಿಕ ಹೋರಾಟಗಾರ ಶ್ರೀ ಕಳಕಪ್ಪ.ಬಿ.ಕ್ಯಾದಿಗುಂಪಿ ಅವರ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಆಯುಕ್ತರು ಶ್ರೀ ರವೀಂದ್ರ ಗುರುನಾಥ ದಾಕಪ್ಪ ಅವರು ಸೆಪ್ಟೆಂಬರ್ 30 ರಂದು ತೆರೆದ ನ್ಯಾಯಲಯದಲ್ಲಿ ದಂಡ ವಿಧಿಸಿದ್ದಾರೆ.




ವರ್ಷ 2018-19 ರಿಂದ 2020-21ರ ವರೆಗೆ ಕರ ವಸೂಲಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನಾ ವರಧಿ, ಬ್ಯಾಂಕ್ ಪಾಸ್ ಶೀಟ್,ಖರ್ಚು ವೆಚ್ಚದ ದಾಖಲೆಗಳು ಹಾಗೂ ಚೆಕ್ ಕೌಂಟರ್ ಫೈಲ್ ಪ್ರತಿಗಳನ್ನು ದೃಢೀಕರಿಸಿ ಒದಗಿಸಬೇಕೇಂದು ದಿನಾಂಕ 07-07-2021 ರಂದು ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿಯಲ್ಲಿ ಮಾಹಿತಿ ದಾಖಲೆ ಒದಗಿಸಬೇಕೆಂದು ಕೋರಿದ್ದರು

ಆದರೆ ಕಾಲ ಮಿತಿಯೋಳಗೆ ಮಾಹಿತಿ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಶ್ರೀ ಚಂದು ಸ್ವಾಮಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ ಬಳಗೇರಿ ಅವರ ವಿರುದ್ದ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿಗೆ ಸ್ಪಂದಿಸಿ ಮಾಹಿತಿ ಆಯೋಗದ ಆಯುಕ್ತರು ಶ್ರೀ ಚಂದು ಸ್ವಾಮಿ ದೊಡ್ಡಮನಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಬಳಗೇರಿ ಅವರಿಗೆ 25000 ಸಾವಿರ ರೂಪಾಯಿ ದಂಡ ವಿಧಿಸುವ ಮೂಲಕ ಆದೇಶ ಹೊರಡಿಸಿದೆ.
ಮುಂದುವರೆದು ಶ್ರೀ ಚಂದು ಸ್ವಾಮಿ ದೊಡ್ಡಮನಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಬಳಗೇರಿ ಅವರಿಗೆ ವಿಧಿಸಿರುವ ದಂಡದ ಮೊತ್ತವನ್ನು ಏಕ ಕಂತಿನಲ್ಲಿ ಅಥವಾ ಮಾಹೆ ರೂ 10000/- ಗಳಂತೆ ಒಟ್ಟು ರೂ 25000/- ಸಾವಿರ ರೂಪಾಯಿಗಳನ್ನು ಸರಕಾರದ ಲೆಕ್ಕ ಶೀರ್ಷಿಕೆ Head of Account “0070-60-118-0-01-000” ಖಾತೆಗೆ ಜಮಾ ಮಾಡಿ ಜಮಾ ಮಾಡಿದ ರಶೀದಿಯೋಂದಿಗೆ ವರದಿ ಸಲ್ಲಿಸಬೇಕೆಂದು ಶ್ರೀ ಚಂದು ಸ್ವಾಮಿ ದೊಡ್ಡಮನಿ ಪ್ರಥಮ ಮೇಲ್ಮನವಿ ಪ್ರಾಧಿಕಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಬಳಗೇರಿ ತಾಲೂಕು ಕುಕನೂರು ಜಿಲ್ಲಾ ಕೊಪ್ಪಳ ಅವರಿಗೆ ಮಾಹಿತಿ ಹಕ್ಕು ಕಾಯ್ದೆ- 2005ರ ಕಲಂ(8)(ಎ)ರನ್ವಯ ನಿರ್ದೇಶಿಸಿದೆ.