ಕೊಪ್ಪಳ ಜನವರಿ 22 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಚಿಕ್ಕಮ್ಯಾಗೇರಿ ಕಲಾತಂಡದ ಮೂಲಕ ಹಮ್ಮಿಕೊಂಡಿದ್ದ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮ ನಡೆದವು.

ಜ 20 ರಿಂದ 22 ರವರಿಗೆ ಕನಕಗಿರಿ ತಾಲ್ಲೂಕಿನ ಸೋಮನಾಳ, ಬಸಿರಹಾಳ, ಕನಕಾಪೂರ, ಗೂಡದೂರ, ಕರಡೋಣ ಗ್ರಾಮಗಳಲ್ಲಿ ನಡೆದ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಆಯಾ ಗ್ರಾ.ಪಂ ಸದಸ್ಯರು ಮತ್ತು ಗ್ರಾಮದ ಹಿರಿಯರು ಚಾಲನೆ ನೀಡಿದರು.

ರಂಗಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಚಿಕ್ಕಮ್ಯಾಗೇರಿ ಕಲಾತಂಡದ ಮುಖ್ಯಸ್ಥರಾದ ಸಂಗಮೇಶ ಚೌಡಿ ಹಾಗೂ ಸದಸ್ಯರಾದ ರಮೇಶ ಸಂಗನಾಳ, ಶರಣಪ್ಪ ಓಜಿನಳ್ಳಿ, ಮಂಜುನಾಥ್, ನಾಗರಾಜ್, ಕಾಳೇಶ್, ಸುಲೋಚನಾ ಬಿ.ಪೂಜಾರ ಹಾಗೂ ಶೋಭಾ ಯಲಬುರ್ಗಾ ಕಲಾವಿದರು ತಮ್ಮ ಕಲೆಯ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮವನ್ನು ಗ್ರಾಮಸ್ಥರು ಉತ್ಸಾಹದಿಂದ ವೀಕ್ಷಿಸಿದರು.
ಜನವರಿ 30 ರವರೆಗೆ ಕನಕಗಿರಿ ತಾಲ್ಲೂಕಿನ ಆಯ್ದ ವಿವಿಧ ಗ್ರಾಮಗಳಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ.
***

error: Content is protected !!