
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 95 ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ದಲಿತ ರಕ್ಷಣೆ ವೇದಿಕೆ ಬೆಂಬಲ ಸೂಚಿಸಿ ಸರ್ಕಾರಕ್ಕೆ ಒತ್ತಾಯ
ಹುಬ್ಬಳ್ಳಿ. ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ ಕೆಲಸ ಕಾರ್ಯನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿಗಳನ್ನು 95 ಜನ ಪೌರಕಾರ್ಮಿಕರನ್ನು ಕಾನೂನು ಬಾಹಿರವಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ.
ಸಿಪಾಯಿ ಕರ್ಮಚಾರಿ ಕಾರ್ಮಿಕರು ಪುನಃ ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಿ ಎಂದು 37 ದಿನ ನಿರಂತರವಾಗಿ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಇದುವರೆಗೂ ಕೂಡ ಇವರಿಗೆ ಯಾವುದೇ ನ್ಯಾಯ ಸಿಕ್ಕಿರುವುದಿಲ್ಲ ಮಹಿಳೆಯರು ಕಾರ್ಮಿಕರು ಮತ್ತು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯರು ಈ ಹೋರಾಟದಲ್ಲಿ ಭಾಗವಹಿಸಿದ್ದರು.