
ಮಂಗಳೂರು : ಪ್ರಧಾನಿ ಮೋದಿ ಅಹಂಕಾರದ ವ್ಯಕ್ತಿ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿಕಾರಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದಂತ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದಂತ ರಣದೀಪ್ ಸಿಂಗ್ ಸುರ್ಜೆವಾಲಾ ಕರಾವಳಿ ಭಾಗದಲ್ಲಿ ಹಿಂದುತ್ವದ ಅಮಲು ಬಿತ್ತಲಾಗಿದೆ, ಹಿಂದುತ್ವ ಪದ ಆರ್ ಎಸ್ ಎಸ್ ಮುಖ್ಯಕಚೇರಿಯಿಂದ ಬಂದಿದೆ.
ಮೋದಿ ಅಹಂಕಾರದ ವ್ಯಕ್ತಿತ್ವ ಹೊಂದಿದ್ದಾರೆ, ಬಿಜೆಪಿಯವರ ಆಲೋಚನೆ ದುರಾಹಂಕಾರದಿಂದ ಕೂಡಿದೆ. ಬಿಜೆಪಿ ಯಾವ ಭರವಸೆಯನ್ನ ಕೂಡ ಈಡೇರಿಸಿಲ್ಲ, ಅಂತ ಮೂರ್ಖರು ಇಂದು ಅಧಿಕಾರ ನಡೆಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ
ಈಗಾಗಲೇ 200 ಯುನಿಟ್ ಉಚಿತ ವಿದ್ಯುತ್, 2000 ಪ್ರತಿ ಕುಟುಂಬದ ಮಹಿಳೆಗೆ ಸಹಾಯ ಧನ ಘೋಷಿಸಿವಂತ ಕಾಂಗ್ರೆಸ್, ಮುಂಬರುವಂತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸೋದಾಗಿ ಹೇಳಿದೆ. ಅಲ್ಲದೇ ಮೀನುಗಾರರ ಕುಟುಂಬಕ್ಕೆ ಬಡ್ಡಿರಹಿತ 10 ಲಕ್ಷ ಸಾಲ ನೀಡುವುದಾಗಿ ಹೇಳಿದೆ.
ಇಂದು ಮಂಗಳೂರಿನಲ್ಲಿ ನಡೆದಂತ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದಂತ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು, ಮುಂಬರುವ ಚುನಾವಣೆಗಾಗಿಗ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಲಾಗುತ್ತದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂದು ಘೋಷಿಸಿದರು. ಇದಷ್ಟೇ ಅಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಉದ್ಯೋಗ, ವ್ಯಾಪಾರ, ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಭಾವೈಕ್ಯತೆಯಿಂದ ಕೂಡಿ ಬಾಳುವಂತ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.