ಹುಲಿಗಿ : ಸಮೀಪದ ಬೇವಿನಹಳ್ಳಿಯಲ್ಲಿ ಶನಿವಾರ ಗ್ರಾಮದ ಆರಾಧ್ಯ ದೈವ ರಾಮ ಬಂಟ ಶ್ರೀ ಆಂಜನೇಯ ದೇವರಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಮಾಡಿದರು. ಮಾಲಾ ವಿಸರ್ಜನಾ ಮುನ್ನ ದಿನವಾದ ಈ ದಿನ 60ಕ್ಕೂ ಅಧಿಕ ಹನುಮ ಮಾಲಧಾರಿಗಳು ಶೋಭ ಯಾತ್ರೆ ಕೈಗೊಂಡರು.
ಇಂದು ರವಿವಾರ ಅಂಜನಾದ್ರಿ ಬೆಟ್ಟದಲ್ಲಿ ಜರಗುವ ಮಾಲಾ ವಿಸರ್ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹನುಮಾ ಮಾಲೆಯನ್ನು ವಿಸರ್ಜನೆ ಮಾಡುವರು.. ಶನಿವಾರ ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಕಟ್ಟೆ ಹೂಗಳಿಂದ ಸಿಂಗರಿಸಿ ಗ್ರಾಮವನ್ನ ಮಧುವಣಗಿತ್ತಿಯಂತೆ ಅಲಂಕರಿಸಿದ್ದರು.ನಂತರ ಶೋಭ ಯಾತ್ರೆಯಲ್ಲಿ ಹನುಮ ದೇವರ ಭಾವಚಿತ್ರವನ್ನು ಹೂಗಳಿಂದ ಅಲಂಕರಿಸಿ ಮೆರವಣಿಗೆ ಮಾಡಿದರು.
ಜೈ ಭಜರಂಗ್ ಬಲಿ, ಹನುಮಾನ್ ಕೀ ಜೈ, ಪವನಸುತ ಕೀ ಜಯ್, ವಾಯುದೇವನಿಗೆ ಜೈ ಎನುತ್ತು ಡಿಜೆ ಸೌಂಡಿನಲ್ಲಿ ಹನುಮ ಮಾಲಾಧಾರಿಗಳು ಭಜನೆ ಪಠಿಸುತ ಕುಣಿದು ಕುಪ್ಪಳಿಸಿದರು. ಈ ಶುಭ ಯಾತ್ರೆಯಲ್ಲಿ ಪಾಲ್ಗೊಂಡ ಯುವ ನಾಯಕ ಕೆ. ಸೋಮಶೇಖರ್ ಹಿಟ್ನಾಳ್ ಹಾಗೂ ಗ್ರಾಮದ ಯುವ ಮುಖಂಡರಾದ ಮುದ್ದಪ್ಪ, ನಾಗರಾಜ್, ಗಿರಿಧರ್ ಸೇರಿದಂತೆ ಹಲವು ಯುವಕರು ಶ್ರೀ ಆಂಜನೇಯನ ದರ್ಶನ ಪಡೆದರು. ನಂತರ ಶೋಭಾಯಾತ್ರೆಯಲ್ಲಿರುವ ಹನುಮ ಮಾಲಾಧಾರಿಗಳ ಜೊತೆ ಕುಣಿದು ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ, ಆಗಮಿಸಿದ ಹನುಮ ಮಾಲದಾರಿಗಳು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗವಿಸಿದ್ದಪ್ಪ ಬಟಿಗೇರಿ, ಮಾರುತಿ ಹೊನ್ನಪ್ಪ, ನಿಂಗಪ್ಪ ಮಡ್ಡಿ, ಮಹದೇವಪ್ಪ ಎ , ಮಂಜುನಾಥ್ ಎಸ್ ಬಿ , ಮಾರುತಿ ಸಿ, ಶಿವಾನಂದ ಕೆ, ಯಮನೂರಪ್ಪ ಸಿ, ಸೋಮಪ್ಪ ಸೇರಿದಂತೆ ಹಲವು ಮಾಲಾಧಾರಿಗಳು, ಬಾಲಾಂಜನೇಯ ಮಾಲಾಧಾರಿಗಳು ಇದ್ದರು.