ಗಂಗಾವತಿ: ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಇರುವ ಐತಿಹಾಸಿಕ ಪ್ರಸಿದ್ಧ ತಾಣವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷ ಲಕ್ಷ ಹನುಮಾನ್ ಭಕ್ತರು ಆಗಮಿಸುತ್ತಾರೆ ಎಂದು ವಿಶ್ವ ಹಿಂದು ಪರಿಷತ್ತಿನ ಸದಸ್ಯರಾದ ಪುಂಡಲೀಕ ದಳವಾಯಿ ಹೇಳಿದರು. ಗಂಗಾವತಿ ನಗರದ ಪತ್ರಿಕೆ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದ ಅವರು, ಹನುಮಾನ್ ಜನಿಸಿದ ನಾಡು ಗಂಗಾವತಿ, ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಯ ಹನುಮಾನ್ ಮಾಲಾಧಿಕಾರಿಗಳು ಮಾಲೆ ವಿಸರ್ಜನೆ ಮಾಡಲು ಇಲ್ಲಿಗೆ ಬರುವರು ಎಂದು ತಿಳಿಸಿದರು. ೨೦೦೮ ರಲ್ಲಿ ಕೇವಲ ೨೫ ಜನರು ಮಾತ್ರ ಹನುಮಾನ್ ಭಕ್ತರು ಮಾಲೆಯನ್ನು ಹಾಕುತ್ತಿದ್ದು ಇಂದು ಆಂಜನೇಯನ ಭಕ್ತಿಯಿಂದ ಲಕ್ಷಂತರ ಭಕ್ತರು ಮಾಲೆಯನ್ನು ಹಾಕುತ್ತಾರೆ ಮತ್ತು ವಿಸರ್ಜನೆ ಮಾಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದ ಹಲವು ಜಿಲ್ಲೆಯ ಹನುಮಾನ್ ಭಕ್ತರು ಆಗಮಿಸಿ, ಗಂಗಾವತಿ ನಗರದ ಎ.ಪಿ.ಎಮ್.ಸಿ ಆವರಣದಲ್ಲಿ ತಂಗುವರು ಎಂದರು. ನಂತರ ಹನುಮಾನ್ ಚಾಲೀಸಾ ಭಕ್ತಿ ಪಂಥದ ಮೂಲಕ ಶ್ರದ್ಧೆ ಭಕ್ತಿಯಿಂದ ಘೋಷಣೆ ಕೂಗುತ್ತಾ ಶ್ರೀ ಕೃಷ್ಣ ದೇವರಾಯ ವೃತ್ತದಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಿ ಹನುಮಾನ್ ಘೋಷಣೆ ಕೂಗುತ್ತಾ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಶೋಭಾಯಾತ್ರೆ ಆರಂಭಿಸಲಾಗುತ್ತದೆ.
ಹನುಮಾನ್ ಮಾಲಾಧಿಕಾರಿಗಳಿಗೆ ಒಟ್ಟಾರೆ ವ್ಯವಸ್ಥೆ ಮಾಡಲಾಗಿದೆ. ಗಂಗಾವತಿ ಎ.ಪಿ.ಎಮ್.ಸಿ, ಹೊಸಪೇಟೆ ಮತ್ತು ಹುಲಿಗಿ ದೇವಸ್ಥಾನದ ಆವರಣದಲ್ಲಿ ತಂಗಲು ಸರಿಯಾದ ವ್ಯವಸ್ಥೆ ಮಾಡಲಾಗಿದೆ .ಊಟ, ಸ್ನಾನದ ವ್ಯವಸ್ಥೆ ಮಾಡಲು ವಿಶ್ವ ಹಿಂದು ಪರಿಷತ್ತ್ ನ ಸದಸ್ಯರು ಕೂಡ ಜೊತೆಗೆ ಇರುತ್ತಾರೆ ಎಂದರು. ಈ ಸಂದರ್ಭದಲ್ಲಿ ಪರುಶುರಾಮ್ ಮಡ್ಡೇರ, ನಗರಸಭೆ ಸದಸ್ಯರು. ಉಮೇಶ್ ಸಿಂಗನಾಳ, ರಮೇಶ್ ಚೌಡ್ಕಿ, ವಿನಯ ಪಾಟೀಲ, ದೊಡ್ಡ ಬಸಯ್ಯ ಮತ್ತು ಇತರ ಇದ್ದರು.