*ಮೈಸೂರು ಜಂಬೂ ಸವಾರಿ ನೆನಪಿಸಿದ ವಸಂತ ವೈಭವ* *ನಾಡಿನ ಸಾಂಸ್ಕøತಿಕ *ವೈವಿಧ್ಯತೆಗೆ ಸಾಕ್ಷಿಯಾದ ಕಲಾ ತಂಡಗಳ ಮೆರವಣಿಗೆ*

ಬಳ್ಳಾರಿ:ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಸಂತ ವೈಭವ ಕಲಾ ತಂಡಗಳ ಮೆರವಣಿಗೆ ದೇಶ ಹಾಗೂ ನಾಡಿನ ಸಾಂಸ್ಕøತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು.

ನಾಡಿನ ವಿವಿಧ ಸ್ಥಳ ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಅಂಬಾರಿಯಲ್ಲಿ ನಗರದ ದೇವತೆ ಕನಕದುರ್ಗಮ್ಮ ದೇವಿಯ ಮೂರ್ತಿ ಹೊತ್ತು ಆನೆ ಲಕ್ಷ್ಮೀ ಜೊತೆಗಾರ್ತಿ ಆನೆ ಚಂಪಕಲಾ ಕಲಾತಂಡಗಳೊಂದಿಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದಳು. ಈ ಮೆರವಣಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬು ಸವಾರಿ ನೆನಪಿಸಿತು.

ನಗರದ ವಿಮ್ಸ್ ಕ್ರೀಡಾಂಗಣ ಬಳಿ ಶುಕ್ರವಾರ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಅಂಬಾರಿಯಲ್ಲಿನ ಕನಕದುರ್ಗಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪವೃಷ್ಠಿ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಬಳ್ಳಾರಿ ಉತ್ಸವವನ್ನು ಜನರ ಉತ್ಸವವಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯ ಸಾಂಸ್ಕøತಿಕ ಆಚಾರ-ವಿಚಾರಗಳು ಉತ್ಸವದಲ್ಲಿ ಅನಾವರಣಗೊಂಡಿವೆ. ಉತ್ಸವದಿಂದಾಗಿ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವಸಂತ ವೈಭವ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ಹೊರ ರಾಜ್ಯದ ಕಲಾತಂಡಗಳು ಭಾಗವಹಿಸಿವೆ. ನಗರದ ಸುಮಾರು 8 ಕಿ.ಮೀ ಉದ್ಧದ ಪ್ರಮುಖ ಹಾದಿಗಳಲ್ಲಿ ಮೆರವಣಿಗೆ ಸಾಗಲಿದೆ ಎಂದರು.

ಬಳ್ಳಾರಿ ಉತ್ಸವ ಅಂಗವಾಗಿ ಜ.21 ಶನಿವಾರದಂದು ದಿವಂಗತ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ ಮಾಡಲಾಗುವುದು. ಈ ವೇಳೆ ರಾಜ್ ಕುಟುಂಬಂದ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನ್ ಪುನೀತ್ ರಾಜಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್‍ಕುಮಾರ್ ಬಂಡಾರು, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್, ಎಡಿಸಿ ಮಂಜುನಾಥ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಟರಾಜ, ರಾಬಕೋವಿ ಜಿಲ್ಲಾ ಹಾಲು ಒಕ್ಕೂಟ ನಿಗಮ ನಿರ್ದೇಶಕರಾದ ವೀರಶೇಖರರೆಡ್ಡಿ ಸೇರಿದಂತೆ ಮತ್ತಿತರು ಇದ್ದರು.

*ಗಮನ ಸೆಳೆದ ಜಾನಪದ ಹಾಗೂ ಸಾಂಸ್ಕøತಿಕ ಕಲಾತಂಡಗಳು;* ವಸಂತ ವೈಭವ ಸಂಭ್ರಮದ ಮೆರವಣಿಗೆಯಲ್ಲಿ ನಾಡಿನ ವಿವಿಧ ಜಾನಪದ ಕಲಾ ಪ್ರಕಾರಗಳು ಹಾಗೂ ಹೊರ ರಾಜ್ಯದ ಕಲಾತಂಡಗಳು ನೋಡುಗರ ಗಮನ ಸೆಳೆದವು.

ಮೆರವಣಿಗೆಯಲ್ಲಿ ರಾಜ್ಯದ ಪುಗಡಿ ನೃತ್ಯ, ಕಂಗೀಲು, ಕುಡುಬಿ ನೃತ್ಯ, ಚಂಡೆವಾದನ, ಘಟೋಧ್ವಜ, ವೀರಗಾಸೆ, ಕೊರಗರ ಡೋಲು, ಕುದುರೆ ಕುಣಿತ, ಮಹಿಳಾ ಪಟಕುಣಿತ, ಆಲಾಯಿ ಹೆಜ್ಜೆಮೇಳ, ಕರಡಿಮಜಲು, ಜಗ್ಗಲಿಗಿ, ಮುಖವಾಡ, ಸಿಂಗಾರಿ ಮೇಳ, ಸಮಾಳ,ಕೊಂಬುಕಹಳೆ, ಕೀಲು ಕುದುರೆ, ಸೋಮನ ಕುಣಿತ, ಬೊಳಕಟ್ಟೆ ನೃತ್ಯ, ಕೊಡವ ನೃತ್ಯ,ಕಂಸಾಳೆ, ತಮಟೆ ನಗಾರಿ, ಮಹಿಳಾ ಪೂಜಾಕುಣಿತ, ಮರಗಾಲು ಕುಣಿತ, ಗಂಡುಗೊಡಲಿ, ಲಂಬಾಣಿ ನೃತ್ಯ, ಹಲಗೆವಾದನ, ನಾದಸ್ವರ, ಕಹಳೆವಾದನ, ಡೊಳ್ಳುಕುಣಿತ, , ಉರುಮೆವಾದ್ಯ, ನಂದಿಧ್ವಜ, ಕೋಲಾಟ, ಗೊರವರಕುಣಿತ, ಅಲಾಯಿ ಹೆಜ್ಜೆಮೇಳ, ಶಿವಕುಣಿತ, ವೀರಭದ್ರಕುಣಿತ, ಹಕ್ಕಿಪಿಕ್ಕಿ ಜನಾಂಗದ ನೃತ್ಯ, ಗೊಂಬೆಕುಣಿತ ತಂಡಗಳು ಪಾಲ್ಗೊಂಡಿದ್ದವು.
ಕೇರಳದ ಕಾಳೆವೇಷ, ಮಯೂರ ನೃತ್ಯಂ, ಟೇಯಾಂ, ಕಥಕಳಿ, ಹಂಸನೃತ್ಯ, ಪೂಜಾಕುಣಿತ, ಸೋಮನಕುಣಿತ ಕಲಾತಂಡಗಳು, ಮೈಸೂರಿನ ಪಾತರಗಿತ್ತಿ ನೃತ್ಯ, ತಮಿಳುನಾಡಿನ ಚಂಡೆವಾದನ, ನಗಾರಿ, ಕಂಸಾಳೆ, ಕೋಳಿ ನೃತ್ಯ, ವೇಷಧಾರಿ, ಪಂಜಾಬಿ ಡೋಲ್, ಆಂಜನೇಯವೇಷ ಮತ್ತು ಆಂಧ್ರಪ್ರದೇಶದ ಗೊರವರಕುಣಿತ, ಗಾರುಡಿಗೊಂಬೆ ಕುಣಿತ ಹಾಗೂ ಮಹಾರಾಷ್ಟ್ರದ ಝಾಂಜ್ ಪತಕ್ ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.

ನಗರದ ವಿಮ್ಸ್ ಕ್ರೀಡಾಂಗಣ ಆವರಣದಿಂದ ಆರಂಭವಾದ ವಸಂತ ವೈಭವ ಮೆರವಣಿಗೆಯು ಸುಧಾ ಸರ್ಕಲ್, ಇನ್‍ಫೆಂಟ್ರಿ ರಸ್ತೆ, ವಾಲ್ಮೀಕಿ ವೃತ್ತ, ಶ್ರೀ ದುರುಗಮ್ಮ ದೇವಸ್ಥಾನ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಡಾ.ರಾಜ್‍ಕುಮಾರ್ ರಸ್ತೆ ಮಾರ್ಗವಾಗಿ ಮುನಿಸಿಪಲ್ ಮೈದಾನದ ರಾಘವ ಮುಖ್ಯ ವೇದಿಕೆಗೆ ತಲುಪಿತು.
—–

error: Content is protected !!