ಕೊಪ್ಪಳ: ಜನಸ್ನೇಹಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಈಗ ಯ್ಯಾಪ್ ಬಳಕೆಯ ಹೊಸ ಪ್ರಯೋಗವು ಗಮನ ಸೆಳೆದಿದೆ.

ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ʼಹೊಣೆಗಾರಿಕೆ ಮತ್ತು ಪಾರದರ್ಶಕತೆ; ಕಾಯ್ದುಕೊಳ್ಳುವ ಸಲುವಾಗಿ ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್  ಯ್ಯಾಪ್ ಕಡ್ಡಾಯ ಗೊಳಿಸಿದೆ.

ನರೇಗಾ ಯೋಜನೆ ಕೂಲಿಕಾರರ ಹಾಜರಾತಿ ವೇಳೆ ನಕಲಿ ಹಾಜರಾತಿ ಬಗ್ಗೆ ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಈ ಯಾಪನ್ನು ಸಿದ್ದಪಡಿಸಲಾಗಿದೆ.

*ಏನಿದರ ಕಾರ್ಯ?:*
ಗ್ರಾಮೀಣಾಭಿವೃದ್ಧಿ ಮಂತ್ರಾಲಯ ನಿರ್ದೇಶನದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ವಹಿಸುವ ಕಾಮಗಾರಿಗಲ್ಲಿ ಒಂದು ಕಾಮಗಾರಿ ಸ್ಥಳದಲ್ಲಿ 20 ಅದಕ್ಕಿಂತ ಹೆಚ್ಚು ಕೂಲಿಕಾರರು ಇರುವ ಎನ್ ಎಂಆರ್ ಹಾಜರಾತಿಯನ್ನು ಎನ್ ಎಂಎಂಎಸ್ ಮುಖಾಂತರ ಸೆರೆ ಹಿಡಿಯಲಾಗುತ್ತಿದೆ. ವೈಯಕ್ತಿಕ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳ ಕೂಲಿಕಾರರ ಹಾಜರಾತಿಯನ್ನು ಈ ಯ್ಯಾಪ್ ನಲ್ಲಿ ಪಡೆಯಲಾಗುತ್ತಿದೆ.
*ದಿನ್ಕಕ್ಕೆರಡು ಬಾರಿ ಹಾಜರಾತಿ:* ಈ ಮುಂಚೆ ಎನ್ ಎಂಆರ್ ಶೀಟ್ ನಲ್ಲಿ ನರೇಗಾ ಕೂಲಿಕಾರರ ಹಾಜರಾತಿಯನ್ನು ಪಡೆಯಲಾಗುತ್ತಿತ್ತು. ಕೆಲ ಕೂಲಿಕಾರರು ಕೆಲಸಕ್ಕೆ ಗೈರಾದರೂ ಹಾಜರಾತಿ ಬೀಳುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಸರಕಾರ ಎನ್ ಎಂಎಂಎಸ್ ಯ್ಯಾಪ್ ಜಾರಿ ತಂದಿದ್ದು, ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕುತ್ತಿದ್ದರಿಂದ ಪಾರದರ್ಶಕತೆ ಕಾಣುತ್ತಿದೆ.

ಬೆಳಗ್ಗೆ 8 ರಿಂದ 11 ರಿಂದ  ಹಾಜರಾತಿ ಹಾಕಲು ಅವಕಾಶ ಇದ್ದು, ಕಾಯಕ ಬಂಧುಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು ಕೂಲಿಕಾರರ ಹಾಜರಾತಿ ಪಡೆಯುತ್ತಿದ್ದಾರೆ.

ಅದರಂತೆ ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತಗಳಲ್ಲಿ ಎನ್ ಎಮ್‌ಎಮ್ ಎಸ್ ಜಾರಿಗಾಗಿ  ರೋಜಗಾರ್ ದಿವಸ್ ದಂದು ನರೇಗಾ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ‌.

ಗ್ರಾಪಂ ಕಾರ್ಯಾಲಯಗಳಲ್ಲಿ ಕಾಯಕ ಬಂಧುಗಳ ಸಭೆ ಕೈಗೊಂಡು ಜಿಲ್ಲೆಯಲ್ಲಿ ಎನ್ ಎಮ್ ಎಮ್ ಎಸ್ ಯ್ಯಾಪ್ ಬಳಕೆ ಕುರಿತು ಮಾಹಿತಿ ನೀಡಿದ್ದರಿಂದ ಎಲ್ಲ ಕಾಮಗಾರಿಗಳಲ್ಲಿ ಕೂಲಿಕಾರರ ಹಾಜರಾತಿ ಎನ್ ಎಂಎಂಎಸ್ ಯ್ಯಾಪ್ ಮೂಲಕ ಪಡೆಯಲಾಗುತ್ತಿದೆ.

*ಜಿಪಂ ಸಿಇಓ ಪ್ರತಿಕ್ರಿಯೆ:*
ಜಿಲ್ಲೆಯಲ್ಲಿ ನರೇಗಾ ಯೋಜನೆಯು ವರ್ಷದಿಂದ ವರ್ಷಕ್ಕೆ ಗುರಿ ಮೀರಿದ ಸಾಧನೆ ಮಾಡಿದೆ. ನರೇಗಾ ಯೋಜನೆಯ ಪರಿಣಾಮಕಾರಿ ಹಾಗೂ ಪಾರದರ್ಶಕ ಅನುಷ್ಠಾನಕ್ಕೆ ಎನ್ ಎಮ್ ಎಮ್ ಎಸ್ ಸಹಕಾರಿಯಾಗಿದೆ. ಇದರಿಂದಾಗಿ ಕೂಲಿಕಾರರು ತಮ್ಮ ಕೆಲಸದ ಅವಧಿ ಮುಗಿಯುವವರೆಗೂ ಕಾಮಗಾರಿ ಸ್ಥಳದಲ್ಲಿದ್ದು, ಕೆಲಸ ನಿರ್ವಹಿಸುವಂತಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಪ್ರತಿಕ್ರಿಯಿಸಿದ್ದಾರೆ.

error: Content is protected !!