ಚಿಕ್ಕಬಳ್ಳಾಪುರ :ಉತ್ಸವಕ್ಕೆ ಭಂಗ ಆಗಬಾರದು ಅಂತ ಮಾಟ ಮಂತ್ರ ಮಾಡಿಸಿ ನಿಂಬೆ ಹಣ್ಣುಗಳನ್ನು ಹಿಡಿದಿದ್ರಾ ಆರೋಗ್ಯ ಸಚಿವ ಡಾ ಕೆ ಸುಧಾಕರ್ ?

ಮಂತ್ರಿಸಿದ ನಿಂಬೆ ಹಣ್ಣುಗಳನ್ನು ಇಟ್ಟುಕೊಂಡು ಮೆರವಣಿಗೆ ನಡೆಸಿದ ಸಚಿವ ಸುಧಾಕರ್ ..!?

ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರ ಉತ್ಸವದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಂತ್ರಿಸಿದ ನಿಂಬೆ ಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆ ನಡೆಸಿದ ವಿಲಕ್ಷಣ ಘಟನೆ ನಡೆದಿದೆ.

ಹೌದು ಚಿಕ್ಕಬಳ್ಳಾಪುರ ನಗರದಲ್ಲಿ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಸ್ಥಬ್ಧ ಚಿತ್ರಗಳ ಹಾಗೂ ಕಲಾವಿದರ ಸಂಭ್ರಮದ ಮೆರವಣಿಗೆ ವೇಳೆ ಸಚಿವ ಸುಧಾಕರ್ ಟಾಂಗಾ ಪಲ್ಲಕ್ಕಿಯೇರಿ ಮೆರವಣಿಗೆಯುದ್ದಕ್ಕು ತನ್ನ ಕೈಯಲ್ಲಿ ಮೂರು ನಿಂಬೆಹಣ್ಣುಗಳನ್ನು ಹಿಡಿದುಕೊಂಡು ಆಡಿಸುತ್ತಾ ಸಾಗಿದ್ದು..

ಈ ಬಗ್ಗೆ ಹಲವು ಅನುಮಾನಗಳು ಉಂಟಾಗಿ ಜನರ ಮಧ್ಯೆ ಗುಸು ಗುಸು ಚರ್ಚೆ ನಡೆದಿದೆ.. ಉತ್ಸವಕ್ಕೆ ಭಂಗ ಆಗಬಾರದು ಅಂತ ಮಾಟ ಮಂತ್ರ ಮಾಡಿಸಿ ನಿಂಬೆ ಹಣ್ಣುಗಳನ್ನು ಹಿಡಿದಿದ್ರಾ? ಅನ್ನೋ ಅನುಮಾನ ಶುರುವಾಗಿದೆ.

error: Content is protected !!