ಕೊಪ್ಪಳ:ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  101 ಅಪರಾಧಿಗಳ ಪೈಕಿ ಬರೋಬ್ಬರಿ‌ 98 ಅಪರಾಧಿಗಳಿಗೆ  ಜೀವಾವದಿ ಶಿಕ್ಷೆ  ಮೂವರು ಅಪರಾಧಿಗಳಿಗೆ ಐದು ವರ್ಷ ಕಠೀಣ ಶಿಕ್ಷೆ ಘೋಷಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ  ಆರೋಪಿಗಳಿಗೆ ಇಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡಿ ಕೊಪ್ಪಳದ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಆದೇಶ

ಅಕ್ಟೋಬರ್ 21 ರಂದು  ಅಪರಾಧಿಗಳು ಎಂದು ಸಾಬೀತಾದ 101 ಅಪರಾಧಿಗಳಿಗೆ ಶಿಕ್ಷೆ ಘೋಷಣೆ ಮಾಡಿದ್ದ ನ್ಯಾಯಾಧೀಶರು ಅಟ್ರಾಸಿಟಿ,ಹಲ್ಲೆ, ಜೀವ ಬೆದರಿಕೆ ಪ್ರಕರಣ,ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ‌ ಪ್ರಕರಣದಲ್ಲಿ ಆದೇಶ

2014 ರ ಆಗಸ್ಟ್ 28 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ಘಟನೆ

ಗಂಗಾವತಿ ನಗರದಲ್ಲಿ ಪವರ್ ಸಿನಿಮಾ ನೋಡಲು ಮರಕುಂಬಿ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸಂಗಡಿಗರು ಹೋಗಿದ್ದರು ಈ ಸಮಯದಲ್ಲಿ ಮಂಜುನಾಥ ಮೇಲೆ ಹಲ್ಲೆಯಾಗಿತ್ತು

ತಮ್ಮೂರಿನ ದಲಿತರೇ  ಹಲ್ಲೆ ಮಾಡಿಸಿದ್ದಾರೆ ಅಂತ ಮಂಜುನಾಥ ಗ್ರಾಮದ ಜನರಿಗೆ ಹೇಳಿದ್ದ
ಈತನ ಪರವಾಗಿ ಗ್ರಾಮದ ಜನರು ದಲಿತರ ಮೇಲೆ ಹಲ್ಲೆ ಮಾಡಿ ಅನೇಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಹಲ್ಲೆ ಮಾಡಲಾಗಿತ್ತು

ಈ ಬಗ್ಗೆ ಭೀಮೇಶ್ ಎಂಬಾತ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಈ ದೂರಿಗೆ 10 ವರ್ಷದ ಬಳಿಕ ನ್ಯಾಯ ದೊರಕಿದೆ.

error: Content is protected !!