ಗಂಗಾವತಿ :ಬಳ್ಳಾರಿಯಿಂದ ಹೊರಗಿದ್ದು ಅಲ್ಲದೇ ರಾಜಕೀಯ ವನವಾಸದಲ್ಲಿದ್ದ ಗಾಲಿ ಜನಾರ್ಧನ ರಡ್ಡಿಯನ್ನು ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಥಳೀಯ ಮಾಜಿ ಶಾಸಕರನ್ನು ಸೋಲಿಸಿ ಆಕಾಶದಷ್ಟು ಆಸೆ ತೋರಿಸಿದ ರೆಡ್ಡಿಯನ್ನು ಗಂಗಾವತಿಯ ಜನ ಗೆಲ್ಲಿಸಿ ವಿಧಾನ ಸಭೆಗೆ ಕಳಿಸಲಾಯಿತು.ಆಗ ಗಂಗಾವತಿ ನನಗೆ ಪುನರ್ಜನ್ಮ ನೀಡಿದ ಕ್ಷೇತ್ರ ಎಂದು ಹೇಳಿದ ಅವರು ಗಂಗಾವತಿ ಮರೆಯುವ ಕಾಲ ಸಮೀಪಸುತ್ತಿದೆ ಇದು ಗಂಗಾವತಿ ಜನತೆ ಮಾಡಿದ ದ್ರೋಹ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆರೋಪಿಸಿದ್ದಾರೆ.
ಶಾಸಕರಾದ ಮೇಲೆ ಆಗೊಮ್ಮೆ ಹಿಗೊಮ್ಮೆ ಕ್ಷೇತ್ರದಲ್ಲಿ ಕಾಣಿಸುತ್ತಿದ್ದ ಅವರು ಉಪ ಚುನಾವಣೆ ನೆಪದಲ್ಲಿ ಸಂಡೂರ್ ಕ್ಷೇತ್ರದ ಚುನಾವಣೆಯಲ್ಲಿ ಮನೆ ಮಾಡಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಗಂಗಾವತಿ ಮರೆತು ಸಂಡೂರಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಇದೇ ತಿಂಗಳಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತುಕಿತ್ತೂರು ರಾಣಿ ಚನ್ನಮ್ಮ ಜಯಂತಿಗೆ ಗೈರು ಆಗುವ ಮೂಲಕ ತಮ್ಮ ನೈಜತೆಯನ್ನು ಪ್ರದರ್ಶಿಸಿದ್ದಾರೆ. ಸರಕಾರಿ ಕಾರ್ಯಕ್ರಮಗಳಲ್ಲಿ ಸರಕಾರದ ಪ್ರತಿನಿಧಿಯಾಗಿ ಭಾಗವಹಿಸಬೇಕಾದ ಶಾಸಕರ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಅಲ್ಲದೇ ರಸ್ತೆ, ಚರಂಡಿ ಸೇರಿದಂತೆ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿಯಂತಹ ಮಹಾ ನಾಯಕರೇ ತಮ್ಮ ಕ್ಷೆತ್ರದಲ್ಲಿ ಸಂಚಾರಿಸುತ್ತಾ jಚುನಾವಣೆ ಪ್ರಚಾರಕ್ಕೆ ತೆರಳುತ್ತಾರೆ. ಆದರೆ ನಮ್ಮ ಶಾಸಕರು ಕ್ಷೇತ್ರ ಮರೆತು ಚುನಾವಣೆಯಲ್ಲಿ ಮಗ್ನ ರಾಗಿದ್ದಾರೆ ಎಂದು ಮ್ಯಾಗಳಮನಿ ಗಂಭೀರ ಆರೋಪ ಮಾಡಿದ್ದಾರೆ.