ಗಂಗಾವತಿ :ತಾಲ್ಲೂಕಿನ ಉಡಮಕಲ್ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ರಾಯಚೂರು, ಕೃಷಿ ಮಹಾವಿದ್ಯಾಲಯ ಗಂಗಾವತಿ, ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅಂತಿಮ ವರ್ಷದ ಬಿ. ಎಸ್ಸಿ. ಕೃಷಿ ವಿದ್ಯಾರ್ಥಿಗಳು ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಬಳಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಮತ್ತು ಅದರ ಲಕ್ಷಣಗಳ ಬಗ್ಗೆ ರೈತರಿಗೆ ವಿವರಿಸಿದರು.
ಉಡಮಕಲ್ ಬೆಳೆಯುವ ಪ್ರಮುಖ ಬೆಳೆಗಳಾದ ನವಣೆ, ಸಜ್ಜೆ, ತೊಗರಿ, ಭತ್ತ, ಮೆಕ್ಕೆಜೋಳ, ಶೇಂಗಾಗಳಲ್ಲಿ ಕಂಡು ಬರುವ ಪೋಷಕಾಂಶಗಳ ಕೊರತೆಗಳ ಬಗ್ಗೆ ಹಾಗೂ ನಿವಾರಣೆ ಬಗ್ಗೆ ಮತ್ತು ಪೋಷಕಾಂಶಗಳ ಮಹತ್ವದ ಬಗ್ಗೆಯೂ ಸಹ ವಿವರಿಸಲಾಯಿತು. ಅಂದರೆ ಹಳದಿ ಬಣ್ಣವು ಸಾರಜನಕ ಕೊರತೆಯಿಂದ, ನೇರಳೆ ಬಣ್ಣವು ರಂಜಕದ ಕೊರತೆಯಿಂದ, ಮತ್ತು ಎಲೆಯ ತುದಿಯಲ್ಲಿ ಹಳದಿಯು ಪೊಟ್ಯಾಶ್ ಕೊರತೆಯಿಂದ ಕಂಡುಬರುತ್ತದೆ ಎಂದು ವಿದ್ಯಾರ್ಥಿಗಳಾದ ಸುನಿಲ್ ಹಾಗೂ ಸಂಜಯ್ ವಿವರಿಸಿದರು.