*ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆ
ತಂಡದ ವತಿಯಿಂದ ಹಿಂದುಳಿದ ವರ್ಗಗಳ  ವಸತಿ ನಿಲಯಗಳ ಆಹಾರ ಪರಿಶೀಲನೆ*

ಗಂಗಾವತಿ :ರಾಜ್ಯಾದಾಂದ್ಯತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ವತಿಯಿಂದ ಕೊಪ್ಪಳ ಜಿಲ್ಲೆ ಯ ಗಂಗಾವತಿ ತಾಲೂಕ ವ್ಯಾಪ್ತಿಯ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ರಾಜ್ಯದ ವಿವಿಧ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಗಳ ವಸತಿ ನಿಲಯಗಳಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ತನಿಖಾ ತಂಡವು ಭೇಟಿ ನೀಡಿ ವಸತಿ ನಿಲಯಗಳ ಲ್ಲಿನ ಆಹಾರದ ಗುಣಮಟ್ಟ ಹಾಗೂ ಆಹಾರ ಪದಾರ್ಥಗಳ ಕುರಿತು ತನಿಖೆ ಕಾರ್ಯ ಕೈಗೊಳ್ಳಲಾ ಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಗಂಗಾವತಿ ತಾಲೂಕಿನ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯ ಜಯನಗರದ ನಿಲಯಕ್ಕೆ  ದಿನಾಂಕ 19-10-2024 ರಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಧಿಕಾರಿ ನಾಗರಾಜ ಕೆ. ಬೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಆಹಾರ ಪದಾರ್ಥಗಳ ಹಾಗೂ ಆಹಾರ ಸಾಮಗ್ರಿಗಳ ಸ್ವಚ್ಛತೆ ಕುರಿತು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ವಸತಿ ನಿಲಯದ ಸಿಬ್ಬಂದಿಗಳು ಇದ್ದರು.

error: Content is protected !!