ಗಂಗಾವತಿ :ಗಂಗಾವತಿ ತಾಲ್ಲೂಕಿನ ಉಡಮಕಲ್ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ರಾಯಚೂರು, ಕೃಷಿ ಮಹಾವಿದ್ಯಾಲಯ ಗಂಗಾವತಿ, ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದ ಅಂಗವಾಗಿ ಅಂತಿಮ ವರ್ಷದ ಬಿ. ಎಸ್ಸಿ. ಕೃಷಿ ವಿದ್ಯಾರ್ಥಿಗಳು ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಬಳಿ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಮಹತ್ವ ಮತ್ತು ಬಳಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಾದ ಅಶ್ವಿನಿ, ರಾಜು, ವಿಶ್ವನಾಥ್ ಅವರು ಜೈವಿಕ ಗೊಬ್ಬರಗಳಾದ ಅಜೋಲ್ಲಾ, ಅಝಟೋಬ್ಯಾಕ್ಟರ್, ಅಜೂಲ್ಲೋ ಸ್ಪೈರುಲ್ಲಮ್ ಹಾಗೂ ರೈಝೋಬಿಯಂಗಳ  ಸಾರಜನಕ ಸ್ಥಿರೀಕರಣದ ವ್ಯವಸ್ಥೆಯ ಬಗ್ಗೆ ತಿಳಿಸಿದರು.

ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡುವ ವಿಧಾನ, ಬೇರುಗಳಲ್ಲಿ ಗಂಟುಕಟ್ಟುವಿಕೆಯ ಪ್ರಕಿಯೆಯ ಬಗ್ಗೆ  ರೈತರಿಗೆ ಸಂಪೂರ್ಣವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಉಡಮಕಲ್ ಗ್ರಾಮದ ರೈತರು ಹಾಗೂ ವಿದ್ಯಾರ್ಥಿಗಳು ಇದ್ದರು.

error: Content is protected !!