ಗಂಗಾವತಿ: ಗ್ರಾಮ ಪಂಚಾಯತಿಗಳ ಸಮಸ್ತ ಅಧಿಕಾರಿಗಳು, ನೌಕರರು ಮತ್ತು ಆಡಳಿತ ವರ್ಗ
ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ
ಅಕ್ಟೋಬರ್-4 ರಿಂದ ರಾಜ್ಯಾಧ್ಯಂತ ಗ್ರಾ.ಪಂ ಸೇವೆಗಳನ್ನು ನಿಲ್ಲಿಸಿ ಅನಿರ್ಧಿಷ್ಠಾವಧಿ ಹೋರಾಟಕ್ಕೆ ಕರೆ ಕೊಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಬಳ್ಳಾರಿ ರಾಮಣ್ಣ ನಾಯಕ ತಿಳಿಸಿದರು.
ಗ್ರಾ.ಪಂ ಸದಸ್ಯರ ಒಕ್ಕೂಟದಿಂದ ಸಮಸ್ತ ಅಧಿಕಾರಿಗಳು, ನೌಕರರು ಮತ್ತು ಆಡಳಿತ ವರ್ಗ
ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸರಕಾರ ಮತ್ತು
ಇಲಾಖೆಯ ಗಮನಕ್ಕೆ ತಂದು ಹಲವು ವರ್ಷಗಳು ಕಳೆದರೂ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ.
ಈ ನಿಟ್ಟಿಯಲ್ಲಿ ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಒತ್ತಾಯಿಸಿ ಅಕ್ಟೋಬರ್-4 ರಿಂದ ರಾ ಜ್ಯಾಧ್ಯಂತ ಗ್ರಾ.ಪಂ ಸೇವೆಗಳನ್ನು ನಿಲ್ಲಿಸಿ ಹೋರಾ ಟಕ್ಕೆ ಕರೆ ಕೊಡಲಾಗಿದೆ.
ಈ ಹೋರಾಟವು ಆರ್.ಡಿ.ಪಿ.ಆರ್ ಇಲಾಖೆಯಿಂದ ರಾಜ್ಯದ ಶೇ 20 ರಷ್ಟು ಜನರಿಗೆ ವಿವಿಧ ಸೇವೆಗಳನ್ನು ನೀಡುತ್ತಿರುವ ಸ್ಥಳೀಯ ಸಂಸ್ಥೆಯಾದ ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿವೃದ್ಧಿ
ಅಧಿಕಾರಿಗಳು, ಕಾರ್ಯದರ್ಶಿಗಳು, ಎಸ್.ಡಿ.ಎ., ಕ್ಲರ್ಕ್ ಕಂ.ಡಾಟಾ ಎಂಟ್ರಿ ಆಪರೇಟರ್, ಕರವಸೂ ಲಿಗಾರ, ನೀರಗಂಟಿ ಜವಾನರ, ಸ್ವಚ್ಛತಾಗಾರರು ಮತ್ತು ಪತ್ರಾಂಕಿತ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರ ಒಕ್ಕೂಟದಿಂದ ಈ ಹೋರಾಟಗಳನ್ನು ನಡೆಸಲಾಗುತ್ತಿದೆ.
ಈ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಗ್ರಾ.ಪಂ ಗಳ ಅಧಿಕಾರಿಗಳು,
ನೌಕರರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸ್ವಯಂ ಪ್ರೇರಿತರಾಗಿ ತನು-ಮನ-ಧನ ದಿಂದ ಪಾಲ್ಗೊಂಡು ಹೋರಾಟವನ್ನು ಯಶಸ್ವಿ ಗೊಳಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಕೊಪ್ಪಳ ಜಿಲ್ಲೆಯ ಜಿಲ್ಲಾಧ್ಯಕ್ಷರು ಬಳ್ಳಾರಿ ರಾಮಣ್ಣ ನಾಯಕ ಕರೆಕೊಟ್ಟರು.