ಗಂಗಾವತಿ(ಸೆ.24): 17 ನೇ ದಿನದ ಗಣಪತಿ ವಿಸರ್ಜನೆ ವೇಳೆ ಗಲಾಟೆ ನಡೆದು ಒಬ್ಬ ಯುವಕನಿಗೆ ಚಾಕು ಇರಿದು, ನಾಲ್ವರ ಮೇಲೆ ಹಲ್ಲೆ ಮಾಡಿದ ಘಟನೆ ಗಂಗಾವತಿ ನಗರದ ಯಶೋದಾ ಆಸ್ಪತ್ರೆ ಎದುರು ನಿನ್ನೆ(ಸೋಮವಾರ) ತಡ ರಾತ್ರಿ ನಡೆದಿದೆ.

ಗಣಪತಿ ವಿಸರ್ಜನೆ ವೇಳೆ ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನಿಗೆ ಚಾಕು ಇರಿದಿದ್ದಾರೆ. ಗುಂಡಮ್ಮ ಕ್ಯಾಂಪ್ ನ ಗಜಾನನ ಯುವಕರ ಸಂಘದ ಡಿಜೆ ಎದುರು ಯುವಕರು ಡಾನ್ಸ್ ಮಾಡುತ್ತಿದ್ದರು. ಈ ವೇಳೆ ಗಲಾಟೆ ನಡೆದಿದೆ. ಘಟನೆಯಲ್ಲಿ ಶಿವು (38) ಎಂಬಾತನಿಗೆ ಚಾಕು ಇರಿದಿದ್ದಾರೆ. ಗಣೇಶ, ಮಂಜು,ಸಾಗರ್ ಎಂಬ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದೆ.

ಮುತ್ತಣ್ಣ ಧರ್ಮಣ್ಣ ಬಾಬು ವೆಂಕಟೇಶ, ಜಂಭ ಮತ್ತು ಇತರೆ 15 ಜನ ಹಲ್ಲೆ ಮಾಡಿದ್ದಾಗಿ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಹಳೇಯ ವೈಷಮ್ಯ ಕಾರಣ ಎಂದು ಹೇಳಲಾಗಿದೆ.

ಘಟನೆಯಲ್ಲಿ ಶಿವು ದುರುಗಪ್ಪ ಮಾದಿಗ ಎಂಬ ಯುವಕ ಗಂಭೀರಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಗಣೇಶ, ಶ್ರೀನಿವಾಸ, ಮಂಜು, ಶಂಕ್ರಪ್ಪ, ಸಾಗರ, ಮನೋಹರ ಎಂಬ ಯುವಕರಿಗೆ ಗಾಯಗಳಾಗಿವೆ. ಈ ಘಟನೆಗೆ ಮುತ್ತಣ್ಣ ಧರ್ಮಣ್ಣ ಬಾಬು ವೆಂಕಟೇಶ, ಜಂಭ ಮತ್ತು ಇತರೆ 15 ಜನ ಹಲ್ಲೆ ಮಾಡಿದ್ದಾಗಿ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಹಳೇಯ ವೈಷಮ್ಯ ಕಾರಣ ಎಂದು ಹೇಳಲಾಗಿದೆ.

error: Content is protected !!