ಗಂಗಾವತಿ – ಸೇ-23 ಗಂಗಾವತಿ ನಗರದ ಹಿರೇಜಂತಕಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ CRP ಗಳಾದ ದೇವೇಂದ್ರಪ್ಪ ಮತ್ತು ಶಾಲೆಯ ಮುಖ್ಯಗುರುಗಳಾದ ತಿಪ್ಪಮ್ಮ , ಚತ್ರಪ್ಪ ಹಾಗೂ ವಿರೂಪಾಪುರದ ಶಾಲೆಯ ಮುಖ್ಯೋಪಾಧ್ಯಾಯರ ರಾಮಣ್ಣ  ಅವರ ನೇತೃತ್ವದಲ್ಲಿ ಸಭೆ ನಡೆಯಿತು, ಸರ್ಕಾರದ SDMC ಮಾರ್ಗ ಸೂಚಿಯಂತೆ ಕೋರಂ-01 ರನ್ವಯ ಶಾಲೆಯಲ್ಲಿ  ದಾಖಲಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅರ್ಧದಷ್ಟು ಪಾಲಕರು ಇರಬೇಕು. ಮೊದಲೇನೆಯ ವಿಧಾನದಲ್ಲಿ ನಡೆಯದಿದ್ದರೆ, ಕೋರಂ -02 ರನ್ವಯ ಎರಡನೇ ನೋಟಿಸ್ ನ್ನು ಪಾಲಕರಿಗೆ ಮಾಹಿತಿ ನೀಡಿಬೇಕು. ಇದರಲ್ಲಿಯೂ ಸಹ ಬಹು ಪಾಲಕರ ಕೊರತೆಯಾದರೆ ಊರಿನಲ್ಲಿ ಡಂಗುರ ಓಡಿಸಬೇಕು,ಕೊನೆಯ ಕೋರಂ ಸಭೆಗೆ ಪಾಲಕರು ಬಾರದೆ ಪಕ್ಷದಲ್ಲಿ, ಶಾಲಾ ಮುಖ್ಯ ಗುರುಗಳು ಅವರೇ SDMC ಯ ಅಧ್ಯಕ್ಷರು ಆಗುತ್ತಾರೆ.

ನಡೆದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಊರಿನ ಮುಖ್ಯಸ್ಥರ ಅಭಿಪ್ರಾಯದ ಮೇಲೆ ನಡೆದ ಸಭೆಯಲ್ಲಿ ತೀವ್ರ ಪೈಪೋಟಿ ನಡೆದು ಕೊನೆಯಲ್ಲಿ ಗುಪ್ತ ಮತದಾನ ಮಾಡುವ ಮೂಲಕ ಅಧ್ಯಕ್ಷರ ನೇಮಕ ಮಾಡಲಾಗಿದೆ. ಈ ಸಭೆಯ ಗುಪ್ತ ಮತದಾನ ಮೂಲಕ ಜಡಿಯಪ್ಪ ಅಧ್ಯಕ್ಷರಾದರು. ಮತ್ತು ರಾಜೇಶ್ವರಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ  ಮಾಜಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ರಮೇಶ್ ಮಾಗಿ ರವರ 3 ವರ್ಷಗಳ ಅವಧಿ ಪೂರ್ಣಗೊಲಿಸಿದ ಮತ್ತು ಇವರ ಜೊತೆ ಸಹ ಸದಸ್ಯರುಗಳಿಗೆ ಬೀಳ್ಕೊಡಲಾಯಿತು.

ಮಾಜಿ ಅಧ್ಯಕ್ಷರಾದ ರಮೇಶ್ ಮಾಗಿ ಮಾತನಾಡಿ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಿದ್ದು,ಮುಖ್ಯವಾಗಿ ಈ ಶಾಲೆಯ ನೂತನ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಒಬ್ಬ ಶಿಕ್ಷಣ ಪ್ರೇಮಿಯಾದ ಬಾಬು ರೆಡ್ಡಿ ಇವರು ಈ ಶಾಲೆಯಲ್ಲಿ ತಮ್ಮ ಬಾಲ್ಯಜೀವನದ ಶಿಕ್ಷಣವನ್ನು . ಈ ಶಾಲೆಯಲ್ಲಿ ಮುಗಿಸಿದ್ದರು. ನಂತರದಲ್ಲಿ ಇವರು ಅಮೆರಿಕದಲ್ಲಿ  ಒಬ್ಬ ದೊಡ್ಡ ಉದ್ಯಮಿಯಾಗಿರುವ ಅವರು ಶಾಲೆಯ ಅಭಿವೃದ್ಧಿಗಾಗಿ ಸುಮಾರು 8-10 ಕೋಟಿಗಳಷ್ಟು ದಾನ ನೀಡಲು ಸಿದ್ದರಿದ್ದು ಶಾಲೆಯ  ಅಭಿವೃದ್ಧಿ ಸಮಿತಿಯು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಾರ್ಡಿನ ನಗರಸಭೆ ಸದಸ್ಯರಾದ ಹುಲಿಗೆಮ್ಮ ಕಿರಿಕಿರಿ ಮಾತನಾಡಿf ಈ ನಮ್ಮ ಶಾಲೆಯ ಅಭಿವೃದ್ಧಿಗಾಗಿ ನೂತನ ಕಟ್ಟಡದ ಉದ್ದೇಶಕ್ಕಾಗಿ ಇದಕ್ಕೆ ಬೇಕಾಗುವ ಫಾರಂ no 03 ಯನ್ನು ಈಗಾಗಲೇ ಸಿದ್ಧವಿದೆ ಎಂದರು.
ಮತ್ತು ಇನ್ನೋರ್ವ ಶಿಕ್ಷಣ ಪ್ರೇಮಿ ಆಗಿರುವ ಹುಸೇನಪ್ಪ ಹಂಚಿನಾಳ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಎಲ್ಲಾ ತರಹದ ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಜಡಿಯಪ್ಪ ಮುಂದಿನ ದಿನಗಳಲ್ಲಿ ನಮ್ಮ ಶಾಲೆಯ ಅಭಿವೃದ್ಧಿಗಾಗಿ ಕೆಲಸವನ್ನು ಮಾಡುತ್ತೇನೆ ಹಾಗು ಎಲ್ಲಾ ಸರ್ವ ಸದಸ್ಯರುಗಳ ಸಮ್ಮತಿಯಿಂದ ಒಳ್ಳೆಯ ಶಿಕ್ಷಣಕ್ಕೆ ಒತ್ತು ಕೊಡುತ್ತೇನೆ ಎಂದರು.ಹಾಗೂ ಪರಶುರಾಮ್ ಕಿರಿಕಿರಿ ಮಾತನಾಡಿ ಶಾಲೆಯಲ್ಲಿ ನಡೆಯುವ ಎಲ್ಲಾ ಸಭೆಗಳಲ್ಲಿ ಎಲ್ಲಾ ಸದಸ್ಯರುಗಳು ಭಾಗವಹಿಸಬೇಕು,ಶಾಲೆಯ ಸ್ವಚ್ಛತೆಯ,ಬಗ್ಗೆ ನೂತನ ಅಧ್ಯಕ್ಷರಿಗೆ ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ಸದಸ್ಯರುಗಳಾದ ಗಣೇಶ, ರಾಮಣ್ಣ ತೆಗ್ಗಿನಮನೆ,ರಾಘವೇಂದ್ರ ಆರತಿ,ತಿರುಪತಿ,ನಾಗರಾಜ, ರಾಘವೇಂದ್ರ,ಪ್ರಕಾಶ, ಭಿಮೇಶ್,ಸುಮಲತಾ,ರೇಣುಕಾ,ರೇವತಿ,ಹುಲಿಗೆಮ್ಮ, ಅನ್ನಪೂರ್ಣ, ದುರುಗಮ್ಮ, ಬಸಿರಬೇಗಂ, ರಾಜೇಶ್ವರಿ ಹಾಗೂ ಊರಿನ ಯುವಕರಾದ ಮಂಜುನಾಥ್ ಹಂಚಿನಾಳ, ಪರಶುರಾಮ್,ಮಲ್ಲಿಕಾರ್ಜುನ್, ಆರತಿ ಮಂಜುನಾಥ್,ಹುಲ್ಲೇಶ, ಮಾರುತಿ, ಇನ್ನಿತರರು ಉಪಸ್ಥಿತರಿದ್ದರು.

error: Content is protected !!