ಕೊಪ್ಪಳ :ಸ್ಟೇಟ ಬ್ಯಾಂಕ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಹಾಗೂ ಜಿಲ್ಲಾ ಮರ‍್ಗರ‍್ಶಿ ಬಯಾಂಕ್ ಕೊಪ್ಪಳದ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ ೧೭.೦೯.೨೦೨೪ ರಂದು ಬೆಳಿಗ್ಗೆ ೧೧.೩೦ ರಿಂದ ನಮ್ಮ ಸಂಸ್ಥೆಯ ಸಿಬ್ಬಂದಿಗಳು ಮತ್ತು ಮಹಿಳಾ ಹೊಲಿಗೆ ತರಬೇತಿಯ ಶಿಬಿರರ‍್ಥಿಗಳು ಸ್ವಚ್ಛತೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತ ನಗರ ಸರ‍್ವಜನಿಕ ಆಸ್ಪತ್ರೆಯ ಆವರಣದೆಡೆಗೆ ಆಗಮಿಸಿದರು.
ನಗರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನೂ ಕೈಗೊಂಡರು. ಸದರಿ ಕಾರ್ಯಕ್ರಮದಲ್ಲಿ ರಾಜಶೇಖರ ಹಿಟ್ನಾಳ ಸಂಸದರು, ಭಾಗವಹಿಸಿ ಮಾತನಾಡಿ ಸ್ವಚ್ಛತೆಯನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದರು. ಸದರಿ ಕಾರ್ಯ ಕ್ರಮದಲ್ಲಿ ಏಸ್.ಬಿ.ಐ ಆರ್.ಸೆಟಿ, ಕೊಪ್ಪಳದ ನಿರ್ದೇಶಕರು ರಾಯೇಶ್ವರ ಪೈ, ಶ್ರೀ ವೀರೇಂದ್ರಕುಮಾರ ಲೀಡಬ್ಯಾಂಕ್ ವ್ವಸ್ಥಾಪಕರು, ಕೊಪ್ಪಳ, ಮಹಾದೇವ ಕರ‍್ತಿ ರವರು ಭಾಗವಹಿಸಿದ್ದರು, ಹಾಗೂ ನಗರ ಸಭೆಯ ಪೌರಯುಕ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.