ಕೊಪ್ಪಳ : ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದಿನಾಂಕ:13/09/2024 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ಕಾರಟಗಿಯ ಕನಕದಾಸ ವೃತ್ತದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದ ಮೆರವಣೆಗೆಯಲ್ಲಿ, ಎಸ್.ಡಿ.ಪಿ.ಐ. ಅಧ್ಯಕ್ಷ ಅಶ್ಮೀರ ಸಿಂಗನಾಳ ಮತ್ತು ಉಪಾಧ್ಯಕ್ಷರು ದಾವೂದ್ ಕಾರಟಗಿ ರವರು ಇದ್ದು ಅದರಲ್ಲಿ ಇಮ್ರಾನ್ ಅಲಿಯಾಸ ಇರ್ಫಾನ ಸಾ: ಗಂಗಾವತಿ ಈತನು ಪ್ರಚೋಧನಕಾರಿಯಾಗಿ ಹೇಳಿಕೆ ನೀಡಿ ಕೋಟ್ಯಾಂತರ ಜನ ಹಿಂದೂಗಳ ಭಾವನೆಗಳಿಗೆ ದಕ್ಕೆ ಮಾಡಿದ್ದು,
ಈ ರೀತಿಯ ಹೇಳಿಕೆಗಳು ರಾಷ್ಟ್ರೀಯ ಏಕತೆ, ಧಾರ್ಮೀಕ ಮತ್ತು ಸೌರ್ಹದತೆಯನ್ನು ನಾಶಮಾಡುತ್ತದೆ. ಕೋಮ ಸೌರ್ಹದತೆಯನ್ನು ಪ್ರಚೋದಿಸುತ್ತದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲು ಶ್ರೀ ಮಂಜುನಾಥ ಮಸ್ಕಿ, ಭಾ.ಜ.ಪಾ ಕಾರಟಗಿ ಮಂಡಲ ಅಧ್ಯಕ್ಷರು, ಜಿ:ಕೊಪ್ಪಳ ರವರು ನೀಡಿದ ದೂರಿನ ಅನ್ವಯ ದಿನಾಂಕ-16.09.2024 ರಂದು ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂಬರ: 235/2024 ಕಲಂ:353(2), 352, 351 R/W 3(5) BNS ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ
ಪ್ರಕರಣದ ತನಿಖೆ ಕೈಗೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಮುಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. ಮುಂದೆ ಕೂಡಾ ಸಮಾಜದ ಶಾಂತಿ, ಕೋಮು ಭಾವನೆ ಮತ್ತು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹ ಪ್ರಚೋದನಾಕಾರಿ ಹೇಳಿಕೆ ನೀಡುವ ಮತ್ತು ಈ ರೀತಿಯ ಸುದ್ದಿ ಹರಡಿಸುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ಪೊಲೀಸ್ ಅಧೀಕ್ಷಕರು ಪತ್ರಿಕಾ ಪ್ರಕಟಣೆ ಹೊರಡಿಸಿದರು