ಗಂಗಾವತಿ: ಸೆಪ್ಟೆಂಬರ್-20 ರಂದು ನಗರದ ಸರ್ಕೀಟ್ ಹೌಸ್‌ನಲ್ಲಿ ಕರ್ನಾಟಕ ರಾಜ್ಯ ಜನ ಸಂಗ್ರಾಮ ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ. ಲಕ್ಷ್ಮೀಪತಿ, ರಾಜ್ಯ ಯುವ ಘಟಕದ ರಾಜ್ಯ ಅಧ್ಯಕ್ಷರಾದ ದೇವರಾಜ ಜಂತಕಲ್ ಇವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಬಸವರಾಜ ಈಳಿಗನೂರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಈಳಿಗನೂರು ಅವರಿಗೆ ಆದೇಶ ಪತ್ರ ನೀಡಿ. ಜಿಲ್ಲೆಯ ಉಳಿದ ಪದಾಧಿಕಾರಿಗಳು ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ ಆಯ್ಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಜನ ಸಂಗ್ರಾಮ ವೇದಿಕೆಯನ್ನು ಬಲಪಡಿಸುವಂತೆ ತಿಳಿಸಲಾಯಿತು.

error: Content is protected !!