ಗಂಗಾವತಿ: ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ರಮೇಶ ಗಬ್ಬೂರ್ ರವರು ಮೊದಲ ಬಾರಿಗೆ ಗಂಗಾವತಿ ನಗರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟರ್ ಎನ್ ನರೇಂದ್ರಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿನ್ನೆ ನಡೆದ ಯುವ ಸಂಭ್ರಮ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಭರತನಾಟ್ಯ ಮನಸೆಳೆಯಿತು. ಸುಗಮ ಸಂಗೀತ ಮತ್ತು ನೃತ್ಯ ಸಂಗೀತ ಪ್ರೇಕ್ಷಕರ ಮನಸೂರೆಗೊಂಡಿತು.

ಭರತನಾಟ್ಯದಲ್ಲಿಯೂ ನಮ್ಮ ಭಾಗದ ಕಲಾವಿದರು ಇಷ್ಟೊಂದು ಸಾಧನೆ ಮಾಡಿದ್ದಾರೆಯೇ ಎಂದು ಪ್ರೇಕ್ಷಕರು ಅಚ್ಚರಿಗೊಂಡರು. ಜಿಲ್ಲೆ ಹೊರ ಜಿಲ್ಲೆಗಳಿಂದ ಬಂದ ಅನೇಕ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಅಕಾಡೆಮಿಯ ಸದಸ್ಯ ರಮೇಶ್ ಗಬ್ಬೂರು ಮಾತನಾಡಿ, ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಪ್ರತಿಭಾನ್ವಿತ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರು ಗಾಯನ ಮತ್ತು ನೃತ್ಯ ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ಬೆರಗಾದರು. ನೃತ್ಯದಲ್ಲಿ ಕಲಾವಿದರು ಮುಖದಲ್ಲಿನ ಭಾವನೆಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸುತ್ತಿದ್ದ ರೀತಿ ಅಮೋಘವಾಗಿತ್ತು. ನಿಜವಾಗಿಯೂ ಈ ಘಟನೆ ವೇದಿಕೆಯಲ್ಲಿ ನಮ್ಮೆದುರಿಗೆ ನಡೆಯುತ್ತಿದೆಯೇ ಎನ್ನುವ ಸಂಶಯ ಮೂಡುವಷ್ಟು ಭಾವಾಭಿನಯ ಸಹಜವಾಗಿತ್ತು. ಹೀಗೆ ಗಾಯನ ಮತ್ತು ನೃತ್ಯ ಮಾಡಿದ್ದನ್ನು‌ ನೋಡಿ ಗಂಗಾವತಿ ಜನತೆಯ  ಹೃದಯ ಗೆಲ್ಲಲು ಯಶಸ್ವಿಯಾದರು. ಬಾನ್ಸುರಿ ವಾದನ, ತಬಲಾ ಜುಗಲಬಂದಿ, ಸಮೂಹ ನೃತ್ಯ ಮತ್ತು ಭರತನಾಟ್ಯ ಈ ಎಲ್ಲವೂ ವಿವಿಧ ಸಂಸ್ಕೃತಿಗಳ ಬಿಂಬಿಸುವ ಮೂಲಕ ಮನಮೋಹಕವಾಗಿ ಕಂಡಿತು. ನೃತ್ಯಗಾರರು ಪಾತ್ರಕ್ಕೆ ಜೀವತುಂಬಿದರು.  ಸಿದ್ದಾರ್ಥ ಎಜುಕೇಶನ್ ವೇಲ್ ಪೇರ್ ಸೊಸೈಟಿ ಯ ಕಾರ್ಯದರ್ಶಿ ನ್ಯಾಯವಾದಿ ಹುಸೇನಪ್ಪ  ಹಂಚಿನಾಳ ಮಾತನಾಡಿ “ಪ್ರತಿಭೆ ಹೊರ ಹಾಕಲು  ಇದು ಒಂದು ಅವಕಾಶ ಎಂದರು ಇಂತಹ ಒಂದು ಅಮೋಘ ಸಮಾರಂಭ ನಡೆಯಲು ಕಾರಣರಾಗಿದ್ದು  ರಮೇಶ ಗಬ್ಬೂರ್” ಎಂದರು. ಈ ಸಂದರ್ಭದಲ್ಲಿ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ಮತ್ತು ಬೇರೆ ಅಕಾಡೆಮಿಗಳ ಸದಸ್ಯರು ಸಾಹಿತಿಗಳು ಭಾಗವಹಿಸಿದ್ದರು. ಜೂನಿಯರ್ ಕಾಲೇಜ್ ಪ್ರಾಂಶುಪಾಲರಾದ ಬಸಪ್ಪ ನಾಗೋಲಿ ತಮ್ಮ ತಂಡದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಭೆಯಲ್ಲಿ ಅಜ್ಮೀರ್ ನಂದಾಪುರ್, ಶರಣಬಸಪ್ಪ ಕೋಲ್ಕರ್, ಡಾ. ಜಾಜಿ ದೇವೇಂದ್ರಪ್ಪ, ಶರಣಪ್ಪ ಮೆಟ್ರಿ, ಪ್ರಕಾಶ್ ಪಾಟೀಲ್, ಶೈಲಜಾ ಹಿರೇಮಠ, ಕೆ.ಪಣಿರಾಜ್, ಗುರುಪ್ರಸಾದ್ ಹಾಗೂ ಇತರೆ ಚಿಂತಕರು, ಸಾಹಿತ್ಯಗಳು, ಸಂಗೀತ ಕಲಾವಿದರು, ನೃತ್ಯ ಕಲಾವಿದರು ಸಾರ್ವಜನಿಕರು ಪಾಲಕರು ಭಾಗವಹಿಸಿ ಸಂಭ್ರಮಿಸಿದರು…

error: Content is protected !!