ಗಂಗಾವತಿ: ಮರ್ಯಾದಾಗೇಡು ಹತ್ಯೆಗಳನ್ನು ನಿರ್ಬಂದಿಸಲು ಕ್ರಮ ಕೈಗೊಂಡು ಇನ್ನುಳಿದ ಆರೋಪಿಗಳನ್ನು ಬಂಧಿಸಿ ಬಲಿಷ್ಟವಾದ ಸೆಕ್ಷನ್‌ಗಳನ್ನು ಹಾಕಿ ಗಲ್ಲು ಶಿಕ್ಷೆಗೆ ಒಳಪಡಿಸಿ ಮತ್ತು ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿ ತಾಲೂಕಿನ ತಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಪತ್ರ ರವಾನೆ
ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿಠಲಾಪುರ ಎಂಬ ಗ್ರಾಮದಲ್ಲಿ ನಡೆದಿದೆ ಎನ್ನಲಾದ ದಲಿತ ಯುವತಿಯ ಮರ್ಯಾದಾಗೇಡು ಹತ್ಯೆಯನ್ನು ಭಾರತೀಯ ಪ್ರಜಾ ಸೇನೆ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸೀತು
ಎಸ್‌ಸಿ (ಮಾದಿಗ) ಜಾತಿಗೆ ಸೇರಿದ 20 ವರ್ಷದ ಯುವತಿ ಮತ್ತು ಎಸ್‌ಟಿ (ವಾಲ್ಮೀಕಿ) ಸಮುದಾ ಯಕ್ಕೆ ಸೇರಿದ ಯುವಕ ಪರಸ್ಪರ ಪ್ರೀತಿಸಿ ಸುಮಾರು ಒಂದೂವರೆ ವರ್ಷದ ಕೆಳಗೆ ಮದುವೆಯಾಗಿ ಯುವಕನ ಮನೆಯಲ್ಲೇ ವಾಸವಾಗಿದ್ದರೆಂದು ತಿಳಿದುಬಂದಿರುತ್ತದೆ.
ಅಂದಿನಿಂದಲೂ ಯುವಕ ಮತ್ತು ಅವನ ಮನೆಯವರು ಆಕೆಯ ಜಾತಿಯ ಕಾರಣಕ್ಕಾಗಿ ಮತ್ತು ವರದಕ್ಷಿಣೆ ತಂದಿಲ್ಲವೆಂದು ಆಕೆಯನ್ನು ಹಿಂಸಿಸುತ್ತಿದ್ದರೆಂದು ಆಕೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಅವಳನ್ನು ಪ್ರತ್ಯೇಕ ಶೆಡ್ ನಿರ್ಮಿಸಿ ಇಟ್ಟು ಹೀಯಾಳಿಸುತ್ತ ಅಸ್ಪೃಶ್ಯತೆ ಆಚರಣೆ ಮಾಡಿರುವುದಾಗಿಯೂ ತಿಳಿದುಬಂದಿದೆ.ಕೊನೆಗೆ ಗಂಡ ಮತ್ತವನ ಮನೆಯವರು ಚಿತ್ರ ಹಿಂಸೆ, ಕಿರುಕುಳಗಳ ನೀಡಿ ಯುವತಿಗೆ ಉಣಿಸಿದ ವಿಷಕ್ಕೆ ಬಲಿಯಾಗಿರುವುದಾಗಿ ಆಕೆಯ ತಂದೆ ತಿಳಿಸಿರುತ್ತಾರೆ
ಈ ಪ್ರಕರಣದಲ್ಲಿ ಈಗಾಗಲೇ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು 13 ಮಂದಿ ಆರೋಪಿಗಳ ಪೈಕಿ ಕೆಲವರನ್ನು ಬಂಧಿಸಿರುತ್ತಾರೆ. ಯಾವುದೇ ರಾಜಕೀಯ ಪ್ರಭಾವಕ್ಕೂ ಒಳಗಾಗದೆ ಉಳಿದ ಆರೋಪಿಗಳನ್ನೂ ಕೂಡಲೇ ಬಂಧಿಸಿ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ಮುಂದುವರೆಸಬೇಕೆಂದು ತಿಳಿಸಿತು
ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆಯಾಗಿ ಸತ್ಯ ಹೊರಬರಬೇಕೆಂದು ಭಾರತೀಯ ಪ್ರಜಾ ಸೇನೆ ಆಗ್ರಹಿಸೀತು ಇದೊಂದು ಪರಿಶಿಷ್ಟ ಜಾತಿ ಯುವತಿಯ ಮೇಲಿನ ದೌರ್ಜನ್ಯವಾ ಗಿದ್ದು, ಇದು ಮರ್ಯಾದಾ(ಗೇಡು) ಹತ್ಯೆಯಾಗಿದೆ ಈ ಪ್ರಕರಣವನ್ನು ಆಡಳಿತವು ಅತ್ಯಂತ ಗಂಭೀರ ರೀತಿಯಲ್ಲಿ ಪರಿಗಣಿಸಬೇಕಿದ್ದು, ಇಂತಹ ಘಟನೆ ಮರುಕಳಿಸಬಾರದು ಎಂದು ಸಂಘಟನೆ ಒತ್ತಾಯಿಸಿದೆ.