ಎರಡು ಮಕ್ಕಳ ಅಮೂಲ್ಯ ಜೀವ ತ್ಯಾಗ* “ಶಿಕ್ಷಕರ ದಿನದಂದು ಶಿಷ್ಯರಿಗೆ ಘೋರ ಶಿಕ್ಷೆ”
ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿಯ ಕಪಗಲ್ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಶಾಲಾ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಹಲವರು ತೀವ್ರವಾಗಿ ಗಾಯಗೊಂಡಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ.
ಪ್ರತಿಯೊಂದು ಜೀವವು ಅತ್ಯಮೂಲ್ಯವಾದದ್ದು
ಯಾವುದೇ ಪರಿಹಾರದಿಂದಲೂ ಜೀವಕ್ಕೆ ಬೆಲೆ ಕಟ್ಟಲಾಗದು. ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾಗ್ಯೂ ಸಹ ಚಾಲಕರ ಅತಿಯಾದ ವೇಗ, ನಿರ್ಲಕ್ಷ್ಯ ಮತ್ತು ರಸ್ತೆ ಸುರಕ್ಷತಾಕ್ರಮಗಳನ್ನು ಪಾಲಿಸದಿರುವುದರಿಂದ ಅಪಘಾತಗಳು ಸಂಭವಿಸುತ್ತಿರುವುದು ತೀವ್ರ ಕಳವಳಕಾರಿ.
ಚಾಲಕರು ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು,ಸದರಿ ಪ್ರಕರಣದಲ್ಲಿ ಸಾರಿಗೆ ನಿಗಮದ ಚಾಲಕರ ನಿರ್ಲಕ್ಷ ಕಂಡುಬಂದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವು ದು.
ಶಾಲಾ ವಾಹನದ ಚಾಲಕರಿಗೆ ಅವರ ವೇಗದಲ್ಲಿ 40ಕೀ.ಮೀ ಮಿರದಂತೆ ಕ್ರಮವಹಿಸಲು ಎಲ್ಲಾ ವಾಹನ ಹೊಂದಿರುವ ಶಾಲೆಗಳ ವ್ಯವಸ್ಥಾಪಕರು ಈ ದುರ್ಘಟನೆಯಿಂದ ಮನಗಾಣಬೇಕು
ಈ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬದವರಿಗೆ ಸಾಂತ್ವನ ತಿಳಿಸುತ್ತಾ ಸಾರಿಗೆ ಸಂಸ್ಥೆಯವತಿಯಿಂದ ತಲಾ ₹5 ಲಕ್ಷಗಳ ಪರಿಹಾರ ಹಾಗೂ ತೀವ್ರ ಗಾಯಗೊಂಡವರಿಗೆ ತಲಾ ₹3 ಲಕ್ಷಗಳ ಪರಿಹಾರ ಹಾಗೂ ಸಣ್ಣಪುಟ್ಟ ಗಾಯಗೊಂಡವರ ಚಿಕಿತ್ಸೆ ನೀಡಲು ಹಾಗೂ ಖುದ್ದು ಸ್ಥಳಕ್ಕೆ ತೆರಳಿ ವ್ಯವಸ್ಥೆ ಕಲ್ಪಿಸಲು ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಶ್ರೀ ಬಿ.ರಾಚಪ್ಪ ಅವರಿಗೆ ಸೂಚಿಸಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಮ್ಮ X ಖಾತೆ ಯಲ್ಲಿ ಹಂಚಿಕೊಂಡಿದ್ದಾರೆ