*ರೌಡಿ ಶೀಟರ್ ಯಮನೂರಪ್ಪ N ಸೊಂಡಿ ಶಾಂತಿ ಪಾಲನಾ ಮುಚ್ಚಳಿಕೆಯಲ್ಲಿನ ಷರತ್ತುಗಳ ಉಲ್ಲಂಘನೆ ಜಾಮೀನು ಜಮೀನಿನ ಪಾಣಿಯಲ್ಲಿ ರೂ 50,000=00 ಭೋಜ ನೊಂದಾಯಿಸಲು ತಸೀಲ್ದಾರ್ ಆದೇಶ ||ವಿಶ್ವನಾಥ್ ಮುರುಡಿ*

ಕನಕಗಿರಿ: ರೌಡಿಶೀಟದಾರನು ಶಾಂತಿ ಪಾಲನಾ ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದಕ್ಕಾಗಿ ಕನಕಗಿರಿ ತಹಶೀಲದಾರ ವಿಶ್ವನಾಥ ಮುರುಡಿ ರವರಿಂದ ಜಮೀನುದಾರರ ಜಮೀನಿನ ಪಾಣಿಯಲ್ಲಿ ರೂ 50,000=00 ಭೋಜ ನೊಂದಾಯಿಸಲು ಆದೇಶ ಹೊರಡಿಸಿದ್ದಾರೆ

ಕನಕಗಿರಿ ಪೊಲೀಸ್ ಠಾಣೆಯ ಪಿ.ಎ.ಆರ್ ಸಂಖ್ಯೆ 146/2024 ಕಾಲಂ 107 ಸಿ.ಆರ್.ಪಿ.ಸಿ ಯಲ್ಲಿ ರೌಡಿಶೀಟುದಾರನಾದ ಯಮನಪ್ಪ ತಂದೆ ನಾಗಪ್ಪ ಸೊಂಡಿ ಸಾ||ಹುಲಿಹೈದರ ಇತನು ಶಾಂತಿ ಪಾಲನಾ ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದ ಕ್ಕಾಗಿ ಪಿ.ಐ ಕನಕಗಿರಿ ಠಾಣೆಯವರು ಸದರಿ ರೌಡಿ ಶೀಟರನ ಜಮೀನುದಾರರ ಜಮೀನಿನ ಪಾಣಿಯಲ್ಲಿ ರೂ 50,000=00 ಭೋಜವನ್ನು ಸರ್ಕಾರಕ್ಕೆ ಮುಟ್ಟುಗೊಲು ಹಾಕಿಕೊಳ್ಳಲು ಕನಕಗಿರಿಯ ತಸೀಲ್ದಾರ್ ರವರಲ್ಲಿ ವರದಿ ಸಲ್ಲಿಸಿದ್ದಾರೆ……

ಅದರಂತೆ ಕನಕಗಿರಿ ತಸೀಲ್ದಾರ್ ವಿಶ್ವನಾಥ ಮುರುಡಿ ವರದಿ ಪರಿಶೀಲನೆ ಮಾಡಿ ಸದರಿ ರೌಡಿ ಶೀಟರನು ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದೂ ಕಂಡುಬಂದಿದ್ದರಿಂದ ಜಾಮೀನು ದಾರನಾದ ಗ್ಯಾನಪ್ಪ ತಂದೆ ಹನುಮಂತಪ್ಪ ಜಾಡಿ ಸಾ||ಹುಲಿಹೈದರ ಇವರ ಜಮೀನು ಸ.ನಂ 144/*/4-08 ಎ.ಗುಂಟೆ ಜಮೀನಿನ ರೂ.50,000=00 ಭೋಜ ನೊಂದಾಯಿಸಲು ದಿನಾಂಕ-24/08/2024ರಂದು ಆದೇಶ ಹೊರಡಿಸಿರುತ್ತಾರೆ

error: Content is protected !!