ಬೆಣಕಲ್ ಗ್ರಾಮ ಪಂಚಾಯತ್ ಪಿ ಡಿ ಓ ಲೋಕಾಯುಕ್ತಬಲೆಗೆ
40 ಸಾವಿರ ಲಂಚಕ್ಕೆ ಬೇಡಿಕೆಲೋಕಾಯುಕ್ತ ಬಲೆಗೆ ಬಿದ್ದ ಬೆಣಕಲ್ ಗ್ರಾ. ಪಂ. ಪಿ. ಡಿ.ಓ.
ಕುಕನೂರು : 50 ಸಾವಿರರೂಗೆ ಬೇಡಿಕೆ ಇಟ್ಟು ಕೊನೆಗೆ 40 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಕುಕನೂರು ಬೆಣಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಫಾರಂ 9/11 ಕೊಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಣಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಾ ರೆಡ್ಡಿ 40 ಸಾವಿರ ರೂ ಲಂಚವನ್ನು ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಕೊಟ್ರೇಶ್ ಗೊಣಿ ಎಂಬುವವರು ತಮ್ಮ ಜಮೀನು ಡೆವಲಪ್ಮೆಂಟ್ ಗಾಗಿ ಫಾರಂ 9/11 ಪಡೆಯಲು ಹೋದಾಗ ಅಭಿವೃದ್ಧಿ ಅಧಿಕಾರಿ ಕೃಷ್ಣಾ ರೆಡ್ಡಿ 50 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ, ಹಾಗೂ ಹೀಗೂ 40 ಸಾವಿರಕ್ಕೆ ಒಪ್ಪಿಕೊಂಡಿದ್ದ (ಪಿ ಡಿ ಒ) ಅಭಿವೃದ್ಧಿ ಅಧಿಕಾರಿಗಳು ಕೃಷ್ಣಾ ರೆಡ್ಡಿ, ಕೊಪ್ಪಳ ನಗರದ ಹೊಟೆಲನಲ್ಲಿ ಖಾಸಗಿ ವ್ಯಕ್ತಿಯ ಮೂಲಕ 40 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಬಟಾಕುರ್ಕಿ ಅವರ ನೇತೃತ್ವದ ತಂಡ ಭ್ರಷ್ಟ ಅಧಿಕಾರಿಯನ್ನು ಯೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಪಡೆಯಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಬಟಾಕುರ್ಕಿ ಹೇಳಿದರು
ಸಂಜಯ್ ದಾಸ್ ಕೌಜಗೇರಿ
ಕಾಲಚಕ್ರ ವರದಿಗಾರರು ಕೊಪ್ಪಳ ತಾಲೂಕ