ಕನಕಗಿರಿ: ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮಸ್ಥರು ರಸ್ತೆ ಕಾಮಗಾರಿ ಬಗ್ಗೆ ಪ್ರಶ್ನಿಸುವ ಸಂಧರ್ಭದಲ್ಲಿ ಸಚಿವರಿಂದ ಗ್ರಾಮಸ್ಥರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಜೊತೆಗೆ  ಸಚಿವರ ಬೆಂಬಲಿಗರು ಗ್ರಾಮಸ್ಥರನ್ನು ನಿಂದನೆ ಮಾಡಿರುವ ಘಟನೆ ನಡೆದಿದೆ.

2023-24ನೇ ಸಾಲಿನ ಜಲ ಜೀವನ್ ಮಷಿನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಹತ್ತಿರದ ಜೀರಾಳ್ ಕಲ್ಗುಡಿ ಗ್ರಾಮಕ್ಕೆ ಧಾವಿಸಿದಾಗ ರಸ್ತೆಯ ವಿಚಾರವಾಗಿ ಗ್ರಾಮದ ನಾಗರೀಕ ಪ್ರಶ್ನಿಸಿದ ಸಂಧರ್ಭದಲ್ಲಿ ಸಚಿವರು ಏಕಾಯಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತ ಗ್ರಾಮದ ನಾಗರಿಕನಿಗೆ ಒಡೆಯಲು ಕಾರಿಂದ ಇಳಿದು ಬಂದರು.

ಚುನಾವಣೆಗೂ ಮುಂಚೆ ಗ್ರಾಮದ ಜನರ ಕಾಲಿಗೆ ಬೀಳುವುದು ಗೆದ್ದು ಅಧಿಕಾರಕ್ಕೆ ಬಂದ ನಂತರ ಅವರ ಬೇಡಿಕೆಗಳನ್ನ ಈಡೇರಿಸದೆ ಕೇಳಲು ಬಂದಂತ ನಾಗರೀಕನಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುವುದು ಇದು ಸಚಿವರ ವರ್ತನೆಯನ್ನು ತೋರುತ್ತಿದೆ ಸಚಿವರು ನಾಗರೀಕರ ಮೇಲೆ ಧರ್ಪ ತೋರುತಿದ್ದಾರೆ ಅವರ ಹಿಂಬಾಲಕರು ಸಹ ಗ್ರಾಮಸ್ಥರ ಮೇಲೆ ಧರ್ಪ ತೋರುತಿದ್ದಾರೆ ಸಚಿವರು ತಮಗೆ ಕ್ಷೆತ್ರದ ಜನರು ನೀಡಿರುವ ಅಧಿಕಾರದ ಭಿಕ್ಷೆಯನ್ನ ಮರೆಯಬಾರದು ಅವರು ಇರುವುದೇ ಜನರ ಸೇವೆ ಮಾಡಲು ಎನ್ನುವುದನ್ನ ಯಾರಾದ್ರೂ ಅವರಿಗೆ ಮನವರಿಕೆ ಮಾಡುವ ಸಂದರ್ಭ ಬಂದಿದೆ ನಾಗರೀಕರ ಪ್ರಶ್ನೆಗೆ ಉತ್ತರಿಸುವುದು ಜನ ಸೇವಕರಾದ ಅವರ ಕರ್ತವ್ಯ ಅವರು ಯಾವುದೇ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಮರೆಯಬಾರದು ಮರೆತರೆ ಮುಂದೊಂದು ದಿನ ಜನ ಇದಕ್ಕೆ ತಕ್ಕ ಪಾಠ ಕಲಿಸೇ ಕಲಿಸುತ್ತಾರೆ.

error: Content is protected !!