ಸಿದ್ದರಾಮಯ್ಯ ಪರ ಪ್ರತಿಭಟನೆಗೆ ಬರದಿದ್ದರೆ ಗೃಹಲಕ್ಷ್ಮಿ, ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ‘ಗ್ಯಾರಂಟಿ ಬಂದ್’ ಎಚ್ಚರಿಕೆ

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ನಡೆಸಲಾಗುತ್ತಿದೆ., ಆದರೆ ನಂಜನಗೂಡು ತಾಲೂಕಿನ ಚಿನ್ನದಗು ಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರ ನ್ನುಗ್ಯಾರಂಟಿಗಳ ಬೆದರಿಕೆ ಹೊಡ್ದಿ ಪ್ರತಿಭಟನೆಗೆ ಕರೇತರಲಾಗುತ್ತಿದೆ

ಸಿಎಂ ಪರವಾದ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಸರ್ಕಾರದಿಂದ ನೀಡಲಾಗುತ್ತಿರುವ ಐದು ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ

ನಂಜನಗೂಡು ತಾಲೂಕಿನ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರನ್ನು ಪ್ರತಿಭಟನೆಗೆ ಕರೆಯಲಾಗಿದೆ. ಚುನಾವಣೆಗೂ ಮುನ್ನ ಗ್ಯಾರಂಟಿ ಯೋಜನೆಗಳ ಮೂಲಕ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರ ಇಂದು ಅದೆ ಗ್ಯಾರಂಟಿಗಳ ಆಮಿಷ ವಡ್ಡಿ ತಮ್ಮ ಸ್ಥಾನದ ಉಳುವಿಗೆ ನಿಂತಿದೆ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಗ್ಯಾರಂಟಿ ಬಂದ್ ಎಂದು ವ್ಯಕ್ತಿ ಡಂಗೂರ ಸಾರಿರುವ ಘಟನೆ ಬೆಳಕಿಗೆ ಬಂದಿದೆ.,

ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಡೆಯುವ ಪ್ರತಿಭಟನೆಗೆ ಬರಬೇಕಂತೆ. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ 2000 ರೂ., ಉಚಿತ ಪ್ರಯಾಣದ ಶಕ್ತಿ ಯೋಜನೆ, ಜೊತೆಗೆ ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ಎಲ್ಲ ಗ್ಯಾರಂಟಿ ನಿಂತು ಹೋಗುತ್ತವೆ ಎಂದು ಹೇಳಿ ಡಂಗೂರ ಸಾರಿ ಪ್ರಚಾರ ಮಾಡಿದ್ದಾರೆ. ಅಂದರೆ ಪ್ರಮುಖವಾಗಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ಡಂಗೂರ ಸಾರಲಾಗಿದೆ ಅದು ಇದೀಗ ಭಾರಿ ಚರ್ಚೆಗೆ ಕಾರಣ ವಾಗುತ್ತಿದೆ

error: Content is protected !!