ಗಂಗಾವತಿ:ನಗರದ ಶ್ರೀ ಅಖಂಡೇಶ್ವರ ದೇವಸ್ಥಾನದ ಮಹಾ ರಥೋತ್ಸವದ ಅಂಗವಾಗಿ ದೇವಸ್ಥಾನದ ಕಮಿಟಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊ ಳ್ಳಲಾಯಿತು.,

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 10ಜೋಡಿಗಳಿಗೆ ಉಚಿತ ವಿವಾಹವನ್ನು ದೇವಸ್ಥಾನದ ಕಮಿಟಿ ವತಿಯಿಂದ ನಡೆಸಿಕೊಡಲಾಯಿತು.
ಈ ಸಂದರ್ಭದಲ್ಲಿ DYSP ಸಿದ್ದಲಿಂಗನಗೌಡ ಪಾಟೀಲ್ ಮಾತಂಗ ಮಹಾಪರ್ವತ ಪೀಠದ ಪೂರ್ಣಾನಂದಸ್ವಾಮಿ, ದೇವಪ್ಪ ದೇವರಮನಿ, ದ್ಯಾಮಣ್ಣ ಮಾಸ್ತರ, ಹಂಪಿ ಹುಲುಗಪ್ಪ, ಕಂಟೆಪ್ಪಾ, ಹುಳುಗೇಶ ದೇವರಮನಿ, ಸಮಾಜದ ಮುಖಂಡರು ಹಾಗೂ ಇತರರು ಇದ್ದರು.