ಕೊಪ್ಪಳ :ಕೊಪ್ಪಳ ನಗರದ ಅಶೋಕ ಸರ್ಕಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು, ಹಾಗೂ ಕಾಂಗ್ರೇಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯ ಕರ್ತ್ ರು , ಜೊತೆಗೆ ಸೇರಿ , ರಾಜ್ಯಪಾಲರು ಹಾಗೂ ಪ್ರತಿ ಪಕ್ಷಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಮುಡಾ ಅಕ್ರಮವಾಗಿ ಪರ್ಯಾಯ ನಿವೇಶನ ಮಂಜೂರು ಮಾಡಿದೆ ಎಂದು ರಾಜ್ಯದ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿದ್ದು ರಾಜ್ಯಪಾಲರು ಇದರ ಅನುಗುಣವಾಗಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ರಾಜ್ಯಪಾಲರು ಹಾಗೂ ಪ್ರತಿ ಪಕ್ಷಗಳ ವಿರುದ್ಧವಾಗಿ ಕೊಪ್ಪಳ ನಗರದ ಅಶೋಕ ಸರ್ಕಲ್ ನಲ್ಲಿ ಇಂದು ಭಾರಿ ಪ್ರತಿಭಟನೆ ನಡೆಸಲಾಯಿತು.

ಮುಡಾದ 50:50 ಯೋಜನೆ ಯಡಿ ಲೇಔಟ್‌ಗಳ ಅಭಿವೃದ್ಧಿ ಗಾಗಿ ಭೂಮಿ ಕಳೆದುಕೊಂಡವರಿಗೆ ಶೇ.50ರಷ್ಟು ಅಭಿವೃದ್ಧಿ ಪಡಿಸಿದ ಭೂಮಿಗೆ ಹಕ್ಕುಪತ್ರ ನೀಡಲಾಗಿದೆ ಎಂಬುದು ಇತ್ತೀಚಿನ ಆರೋಪ ಈ ಆರೋಪದ ವಿರುದ್ಧ ಸಿದ್ದರಾಮಯ್ಯನವರ ಪರ, ಹಾಗೂ ಅವರನ್ನು ವಿರೋಧಿಸುವ ಅವರು ಯಾರೇ ಆಗಿರಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ, ಮತ್ತು ಸಿದ್ದರಾಮಯ್ಯನವರನ್ನು ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟು ಇಳಿಯಲು ರಾಜೀನಾಮೆ ನೀಡಲು ಬಿಡುವುದಿಲ್ಲ ಎನ್ನುವ ಅವರ ಕೂಗು ಇಂದು ಕೊಪ್ಪಳ ನಗರದಲ್ಲಿ ಜೋರಾಗಿತ್ತು,
ವರದಿ :ಸಂಜಯ್ ದಾಸ್ ಕೌಜಗೇರಿ,
ಕಾಲಚಕ್ರ, ತಾಲ್ಲೂಕು ವರದಿಗಾರರು ಕೊಪ್ಪಳ