ಗಂಗಾವತಿ :ನಿರ್ಮಾಣಗೊಂಡು ಹಲವು ವರ್ಷಗಳಾದರೂ ಇನ್ನು ಉದ್ಘಾಟನೆಗೊಳ್ಳದೆ ಪಾಳುಬಿದ್ದಿ ರುವ ಗಂಗಾವತಿ ನಗರದ ಸಾಲುಮರದ ತಿಮ್ಮಕ್ಕನ ಉದ್ಯಾನವನ.,ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.,ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೇ., ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತ ರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ     ನೀರುಣಿಸಿ ಬೆಳೆಸಿದ್ದಾಳೆ., ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ.

ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್., ಕ್ಯಾಲಿಫೋರ್ನಿ ಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ      ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರ ವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ ಇಂತಹ ವಿಶ್ವಮಟ್ಟದಲ್ಲಿ ಹೆಸರು ವಾಸಿಯಾಗಿರುವವರ ಹೆಸರಿನಲ್ಲಿ ನಿರ್ಮಾಣವಾಗಿರುವ ಗಂಗಾವತಿ ತಾಲೂಕಿನ ಉದ್ಯಾನವನಕ್ಕೆ ಇನ್ನು ಚಾಲನೆ ನೀಡದೆ ಅದನ್ನು ಪಾಳುಗೆಡವಿರುವುದು ಸ್ಥಳೀಯ ರಾಜಕಾರಣಿಗಳು ಮತ್ತು ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರುತ್ತಿದೆ ಮತ್ತು ಇದರ ಸರಿಯಾದ ನಿರ್ವಹಣೆಯ ಕೊರೆತೆತಿಯಿಂದ ದನ ಕರುಗಳನ್ನು ಮೇಯಿಸುವವರ ಸಂಖ್ಯೆಯು ಹೆಚ್ಚಾಗಿದೆ ಅದರಲ್ಲಿ ನೆಟ್ಟ ಎಲ್ಲಾ ಸಸಿಗಳು ದನಗಳ ಪಾಲಾಗುತ್ತಿವೆ ಆದಷ್ಟು ಬೇಗನೆ ಈ ಉದ್ಯಾನವನವನ್ನು ಪುನರ್ ದುರಸ್ಥಿಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಅಣಿ ಮಾಡಿಕೊಡಬೇಕು ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು ಅರಣ್ಯ ಅಧಿಕಾರಿಗಳು ಉದ್ಯಾನವನದ ಸರಿಯಾದ ನಿರ್ವ ಹಣೆ ಮಾಡಬೇಕು ಇಲ್ಲವಾದಲ್ಲಿ ಪರಿಸರ ಪ್ರೇಮಿಗಳು ಇದನ್ನು ಸಹಿಸುವುದಿಲ್ಲ.

error: Content is protected !!