ಗಂಗಾವತಿ :ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿಯ 19ನೇ ಗೆಟ್ ನ ಚೈನ್ ಲಿಂಕ್ ಕಟ್ ಆಗಿರುವದಕ್ಕೆ TB ಬೋರ್ಡ್ ಮತ್ತು ಸರಕಾರದ ನಿರ್ಲಕ್ಷದಿಂದ ಸರಿಯಾದ ನಿರ್ವಹಣೆ ಇಲ್ಲದೇ ಜಲಾಶಯ ಬರಿದಾಗಿದೆ ಎಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಗಂಭೀರ ಆರೋಪ ಮಾಡಿದ್ದಾರೆ.

2019 ರಲ್ಲಿ ಲೋಪವಾದ ಮೇಲೆ ಎಚ್ಚರವಹಿಸಬೇಕಾಗಿತ್ತು.2022 ರ ನಂತರ ಎರಡು ವರ್ಷ ನೀರು ತುಂಬಿರಲಿಲ್ಲ. ಆಗ ಎಲ್ಲಾ ಗೆಟಿನ ಎಲ್ಲಾ ಭಾಗಗಳನ್ನು ಪರಿಶೀಲನೆ ಮಾಡಬೇಕಾಗಿತ್ತು. ಪ್ರತಿ ಸಮಯದಲ್ಲಿ ಪರಿಶೀಲನೆ ಮಾಡಿ ಕಾಲ ಕಾಲಕ್ಕೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಅಧಿಕಾರಿಗಳ ಕರ್ತವ್ಯ. ಕೇವಲ ಕಾಗದದಲ್ಲಿ ವರದಿ ಮಾಡಿ ನಿರ್ವಹಣೆಯ ಹಣ ಸರಿಯಾಗಿ ಬಳಕೆ ಮಾಡದೇ ದುರುಪಯೋಗವಾಗಿದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಖ್ಯಇಂಜನಿಯರ್ ಹುದ್ದೆ ತುಂಬದೆ ಕೇವಲ ಪ್ರಭಾರಿಯಾಗಿ ಕಾರ್ಯ ಮಾಡುವದಕ್ಕೆ ಸೀಮಿತಗೊಳಿಸಿದ ಸರಕಾರದ ಕ್ರಮ ಸರಿಯಲ್ಲ. ಪರಿಣಿತಿ ಹೊಂದಿರುವ ಫರ್ಮೆಂಟ್ ಮುಖ್ಯ ಇಂಜಿನಿಯರ್ ನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಬೋರ್ಡ್ ನಲ್ಲಿ ಎರಡು ರಾಜ್ಯದವರು ಇರುತ್ತಾರೆ, ಇದುವರೆಗೂ ಅಧಿಕಾರ ಅನುಭವಿಸಿರುವ ಕಾಡಾ ಅಧ್ಯಕ್ಷರು ಹಾಗೂ ಎರಡು ರಾಜ್ಯಗಳು ಮತ್ತು ಕೇಂದ್ರ ಸರಕಾರ ಈ ಲೋಪದ ಹೊಣೆ ಹೊರಬೇಕು.ಇವರ ನಿರ್ಲಕ್ಷದಿಂದ ಅಮೂಲ್ಯ ಜಲಸಂಪನ್ಮೂಲ ಅನವಶ್ಯಕ ಹರಿದುಹೋಗಿರುವದರಿಂದ ಸಾವಿರಾರು ರೈತರು , ಈ ಭಾಗದ ಜನರು ಆತಂಕಗೋಳಗಾಗಿದ್ದಾರೆ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಣೆಕಟ್ಟು ನಿರ್ಮಾಣದ ವೇಳೆ ಸ್ವತಂತ್ರಪೂರ್ವದಲ್ಲಿ ಮೈಸೂರು, ಮದ್ರಾಸ್, ಹೈದ್ರಾಬಾದ್ ಸಂಸ್ಥಾನಗಳ ರಾಜರ ಬಿನ್ನಾಭಿಪ್ರಾಯ ಹಾಗೂ ಸ್ವತಂತ್ರ ನಂತರದ ಪ್ರಾರಂಭದಿನಗಳಲ್ಲಿ ದೇಶದ ಹೊರಗಿನ ರಕ್ಷಣೆಯ ಜೊತೆಗೆ ಆಂತರಿಕ ಸಮಸ್ಯೆ ಬಗೆಹರಿಸುವ ಆಗಿನ ಒಪ್ಪಂದ ಆ ಸಂದರ್ಭಕ್ಕೆ ತಕ್ಕಂತೆ ಆಗಿರಬಹುದು. ಈಗ ದೇಶ ಬಲಿಷ್ಠವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿದ್ದೇವೆ. ಈಗಿನ ಪರಿಸ್ಥಿತಿಗೆ ಪ್ರಧಾನಿಗಳು ಒಳ್ಳೆಯ ತೀರ್ಮಾನ ತೆಗೆದುಕೊಂಡು ಆಣೆಕಟ್ಟು ಕರ್ನಾಟಕದಲ್ಲಿ ಇರುವದರಿಂದ ಇಲ್ಲಿನ ಜನರ ಜೀವ ಮತ್ತು ಜೀವನ ಸರಕಾರಕ್ಕೆ ಮುಖ್ಯವಾಗಿರುವದರಿಂದ TB ಬೋರ್ಡ್ ಗೆ ಇರುವ ಎಲ್ಲಾ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಕರ್ನಾಟಕ ಸರಕಾರಕ್ಕೆ ನೀಡುವ ಕಾನೂನು ಮಾಡಬೇಕು. ಹಿಂದೆ ಬ್ರಿಟಿಷ್ ರು ಭಾರತದಲ್ಲಿ ಸಾರ್ವಭೌಮತ್ವ ನಡೆಸಿದಂತೆ ಆಂಧ್ರಪ್ರದೇಶ ಕರ್ನಾಟಕದ ಆನೇಕಟ್ಟಿನ ಮೇಲೆ ಸಾರ್ವಭೌಮತ್ವ ಸಾದಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಅವರ ಪಾಲಿನ ನೀರು ಅವರಿಗೆ ಕೊಡುವ ಹಾಗೂ ಎಲ್ಲಾ ಅಧಿಕಾರ ಕರ್ನಾಟಕ ಸರಕಾರಕ್ಕೆವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಮ್ಯಾಗಳಮನಿ ಪತ್ರಿಕಾ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ಚಂದ್ರು ನಿಸರ್ಗ, ದುರ್ಗೇಶ್ ಹೊಸಳ್ಳಿ, ರಾಘು ಕಡೆಬಾಗಿಲು, ಕೃಷ್ಣ ಮೆಟ್ರಿ, ಪಂಪಾಪತಿ ಕುರಿ, ಬೋಗೇಶ್, ಕನಕ, ಬಸವರಾಜ,ಚಾಂದಬಾಷಾ, ಮುತ್ತು ಹೊಸಳ್ಳಿ, ಮತ್ತಿತರರು ಇದ್ದರು.

error: Content is protected !!