ಗಂಗಾವತಿ :ನಗರದ ಕೂಗಳತೆ ದೂರದ ಹೊಸಳ್ಳಿ ರಸ್ತೆಯಲ್ಲಿರುವ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿನಿಯರು ಗಂಗಾವತಿ ನಗರದಲ್ಲಿ ವಿವಿಧ ಕಾಲೇಜ್ ಗಳಿಗೆ ತಮ್ಮ ವಿದ್ಯಾಭ್ಯಾಸ ಕಲಿಯಲು  ಬೆಳಗ್ಗೆ ಹಾಸ್ಟೆಲ್ ನಿಂದ ಕಾಲೇಜಿಗೆ  ಹೋಗುವಾಗ ಕೆಲವು ಪುಂಡ ಹುಡುಗರು ಬಂದು ತಮ್ಮ ಮೊಬೈಲ್ ಗಳಲ್ಲಿ ಪೋಟೋ ತೆಗೆದುಕೊಳ್ಳುವದು, ವಿಡಿಯೋ ಮಾಡಿಕೊಂಡು ಇನ್ಸ್ಟಾಗ್ರಾಮ್ ದಲ್ಲಿ ಹಾಕವುದು, ಬೈಕಲ್ಲಿ ಜೋರಾಗಿ ಬಂದು ಎದರಸುವುದು, ಕಿರುಕುಳ ಕೊಡುತ್ತಾ ದಿನಾನಿತ್ಯ ಚುಡಾಯಿಸುತ್ತಾದರೆ ಎಂದು ಹಲವಾರು ವಿದ್ಯಾರ್ಥಿನಿಯರು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮುಂಖಡರಗಳ ಮುಂದೆ ಅಳಲು ತೋಡಿಕೊಂಡರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರ ಹಾಗೂ ಅದ್ದೂರಿಯಾಗಿ ನಿನ್ನೆ ದಿನ ಆಚರಣೆ ಮಾಡಿದ್ದವೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ , ಸಂವಿಧಾನ ಶಿಲ್ಪಿ ಡಾ. ಬಿ.ಆರ್, ಅಂಬೇಡ್ಕರ್ ರವರ ಪೋಟೋ ಇಟ್ಟು ಪೂಜೆ ಕಾರ್ಯಕ್ರಮ ಮಾಡಿ ನಮ್ಮ ರಾಷ್ಟ್ರ ಧ್ವಜವನ್ನು ಹಾರಿಸಲಾಯಿತು ಆದರೆ ಆ ಇಬ್ಬರು ಮಹಾನ್ ವ್ಯಕ್ತಿಗಳ ಆಶಾಯ ಇಂದಿಗೂ ಸರಿಯಾಗಿ ಜಾರಿ ಆಗುತ್ತಿಲ್ಲ  ಏಕೆಂದರೆ ಮಹಾತ್ಮ ಗಾಂಧಿಯವರು ದೇಶದಲ್ಲಿ ಒಬ್ಬ ಮಹಿಳೆ ಒಬ್ಬಂಟಿಯಾಗಿ ಮಧ್ಯರಾತ್ರಿ ಧೈರ್ಯದಿಂದ , ನಿರ್ಭಯವಾಗಿ ನಡು ರಸ್ತೆಯಲ್ಲಿ ಅಡ್ಡಾಡಿದಾಗ ನಿಜಾವಾಗಿ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು, ಇನ್ನೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್ ಅವರು ರವರು ಮಹಿಳೆಯರ ಸಮಾನತೆಗಾಗಿ ಹಲವಾರು ಕಾಯ್ದೆಗಳನ್ನು ಸಂವಿಧಾನದಲ್ಲಿ ಬರೆದು ಮಹಿಳೆಯರ ಸ್ವಾವಲಂಬಿಯಾಗಿ ಬದಕಲು ದಾರಿ ಮಾಡಿ ಕೊಟ್ಟಿದ್ದಾರೆ ಇಂತಹ ಸನ್ನಿವೇಶದಲ್ಲಿ ಗಂಗಾವತಿ ನಗರದಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದೆ ಭಯದ ವಾತವರಣದಲ್ಲಿ ಕಾಲೇಜ್ ಬರುತ್ತಿರಿವು ಪರಿಸ್ಥಿತಿ ನಗರದ ಹೊಸಹಳ್ಳಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರಿಗೆ ಇದೆ.

ಪ್ರತಿನಿತ್ಯ ರಾಜ್ಯದಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ಒಂದಿಲ್ಲದ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ ಅದರಲ್ಲಿ ನಮ್ಮ ಗಂಗಾವತಿ ನಗರದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುವುದರ ಮೂಲಕ ಅವರ ಮೇಲೆ ದಾಳಿ ಮಾಡುತ್ತಿರುವ ಪುಂಡರ ಕಾಟದಿಂದ ಬೇಸತ್ತ ಹಲವಾರು ವಿದ್ಯಾರ್ಥಿನಿಯರು ತಮ್ಮ‌ ಶಿಕ್ಷಣ ಅರ್ಧಕ್ಕೆ ಬಿಡಬೇಕಾಗಿದೆ ಕೆಲವರು ತಮ್ಮ ತಮ್ಮ ಗ್ರಾಮದಿಂದ ಕಾಲೇಜ್ ಗೆ ಬರುತ್ತಾರೆ ಮನೆಯಲ್ಲಿ ಹೇಳಿದರೆ ಕಾಲೇಜ್ ಬಿಡಸುತ್ತಾರೆ ಎಂಬ ಭಯದಲ್ಲಿ ಹಲವಾರು ವಿದ್ಯಾರ್ಥಿನಿಯರು ಏನು ಹೇಳುತ್ತ ಇಲ್ಲ ಆದ್ದರಿಂದ ಭಾರತಈ ಕೂಡಲೇ ಪೋಲಿಸ್ ಇಲಾಖೆ ವಿದ್ಯಾರ್ಥಿನಿರನ್ನು ಚುಡಾಯಿಸುತ್ತಿರುವ ಪುಂಡರನ್ನು ಬಂದಿಸಬೇಕು ಹಾಗೂ ಹಾಸ್ಟೆಲ್ ನಲ್ಲಿ ಇರವು ಎಲ್ಲಾ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡಬೇಕು, ಮತ್ತು ಬೆಳಿಗ್ಗೆ, ಸಂಜೆ, ಮಧ್ಯಾಹ್ನ ಮುಪ್ತಿಯಲ್ಲಿ ಪೊಲೀಸರನ್ನು ನೇಮಿಸಬೇಕು ಆ ಎಲ್ಲಾ ವಿದ್ಯಾರ್ಥಿಗಳು ಧೈರ್ಯದಿಂದ ನಿರ್ಭೀತವಾಗಿ ಕಾಲೇಜ್ ಗಳಿಗೆ ಹೋಗುವಂತೆ ಮಾಡಬೇಕಾದ ಕೆಲಸ ಪೋಲಿಸ್ ಇಲಾಖೆ ಮೇಲಿದೆ.

ಈ ಕೂಡಲೇ ಬೆಳಿಗ್ಗೆ 7 ರಿಂದ ಸಂಜೆ 7 ರವರಿಗೆ ಹೊಸಳ್ಳಿ ರಸ್ತೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಕ್ಷಣೆ ಕೊಡಬೇಕು ಎಂದು ಭಾರತ ಈ ಕುರಿತು ಇಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತಾಲ್ಲೂಕು ಸಮಿತಿಯು ಮುಂಖಡರು ನಗರದಲ್ಲಿ DYSP ಹಾಗೂ ನಗರ ಠಾಣೆ PI ರವರಿಗೆ ಮನವಿ ಪತ್ರ ಸಲ್ಲಿಸಲಾಯಿತ್ತು ಎಂದು ಸಂಘಟನೆಯ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ. ಕಾರ್ಯದರ್ಶಿ ಶಿವುಕುಮಾರ್, ಮುಖಂಡರಾದ  ಬಾಲಾಜಿ. ಶರೀಪ್ ನಾಗರಾಜ್ ಮಾರುತಿ  ಹಾಗೂ ವಿದ್ಯಾರ್ಥಿನಿಯರು ಇದ್ದರು.

error: Content is protected !!