ಇಂದಿನಿಂದ ನಿಷೇಧಾಜ್ಞೆ ಜಾರಿ .
ಗಂಗಾವತಿ.ಜು-07 :ನಗರ ವ್ಯಾಪ್ತಿಯ ವಿರುಪಾಪುರ ತಾಂಡದಲ್ಲಿ ಶಾಂತಿ ಕಾಪಾಡುವ ನಿಮಿತ್ತ ಭಾರತೀಯ ನಾಗರೀಕ ಸುರಕ್ಷಾ ನೀತಿ ಸಂಹಿತೆ 2023 ಕಲಂ 163 ಬಿ.ಎನ್.ಸಿ.ಸಿ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಯು. ನಾಗರಾಜ್ ಶನಿವಾರದಂದು ಆಜ್ಞೆ ಹೊರಡಿಸಿದ್ದಾರೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿರುಪಾಪುರ ತಾಂಡಾದಲ್ಲಿ ಜರಗುವ ಮೊಹರಂ ಹಬ್ಬದ ವೇಳೆ ಆಲಾಯಿ ಕುಣಿತ ಹಾಗೂ ಇನ್ನಿತರ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಲಂಬಾಣಿ ಜನಾಂಗ ಹಾಗೂ ಭೋವಿ ಸಮುದಾಯ ನಡುವೆ ಮಾರಾಮಾರಿ ಅಥವಾ ಜಗಳಗಳಾಗುವ ಸಾಧ್ಯತೆ ಇದೆ. ಈ ಕುರಿತಂತೆ ಗುಪ್ತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಾಗೂ ಸರ್ಕಾರದ ಆಸ್ತಿ ಕಾಪಾಡುವ ನಿಟ್ಟಿನಲ್ಲಿ ಈ ಬಾರಿ ವಿರುಪಾಪುರ ತಾಂಡದಲ್ಲಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಭಾರತೀಯ ನಾಗರೀಕ ಸುರಕ್ಷಾ ನೀತಿ ಸಂಹಿತೆ 2023 ಕಲಂ 163 ಬಿ.ಎನ್.ಸಿ.ಸಿ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.