ಗಂಗಾವತಿ :2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್-ಲೈನ್ ಅರ್ಜಿ ಆಹ್ವಾನ.
2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಖೆ, ಕೊಪ್ಪಳ ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ವೆಟ್ರಿಕ್ ನಂತರ ಬಾಲಕರ ವಸತಿನಿಲಯ ಗಂಗಾವತಿ -01, ಅಲ್ಪಸಂಖ್ಯಾತರ ವೆಟ್ರಿಕ್ ನಂತರ ಬಾಲಕರ ವಸತಿನಿಲಯ ಗಂಗಾವತಿ -02, ಅಲ್ಪಸಂಖ್ಯಾತರ ವೆಟ್ರಿಕ್ ನಂತರ ಬಾಲಕರ ವಸತಿನಿಲಯ ಕಾರಟಗಿ ಮತ್ತು ಅಲ್ಪಸಂಖ್ಯಾತರ ವೆಟ್ರಿಕ್ ನಂತರ ಬಾಲಕಿಯರ ವಸತಿನಿಲಯ ಗಂಗಾವತಿ ಈ ವಸತಿನಿಲಯಗಳಿಗೆ ಪ್ರವೇಶ ಪಡೆಯಲು, ಪಿ.ಯು.ಸಿ ಮತ್ತು ಪಿಯುಸಿ ಸಮಾನಾಂತರ (ಐ.ಟಿ.ಐ, ಡಿಪ್ಲೋಮ, ಪ್ಯಾರಮೆಡಿಕಲ್) ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಸ್ಟಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಇವರಿಗೆ ಶೇ.75 ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 8.25% ಸ್ಥಾನಗಳ ಪ್ರವೇಶಕ್ಕಾಗಿ ಆನ್-ಲೈನ್ (ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ) ಮೂಲಕ https://shp.karnataka.gov.in/ ವೆಬ್‌ಸೈಟ್ ಮುಖಾಂತರ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.
ದಿನಾಂಕ: 08.07.2024 ರಿಂದ ಪ್ರಾರಂಭಿಸಿ ದಿನಾಂಕ:05.08.2024 ರವರೆಗೆ ಅರ್ಜಿ ಸ್ವೀಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ತಾಲೂಕ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಗಂಗಾವತಿ.
ಸಂಬಂಧಿಸಿದ ನಿಲಯಪಾಲಕರು
ಕಛೇರಿ ವಿಳಾಸ: ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಜುನಿಯರ್ ಕಾಲೇಜ್ ಆವರಣ, ಗಂಗಾವತಿ.
ದೂರವಾಣಿ: 08533-230027