ಕೊಪ್ಪಳ :ಕೊಪ್ಪಳ ಜಿಲ್ಲೆ, ಗ್ರಾಮೀಣ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ಕು.ಅನುಶ್ರೀ ಈಕೆಯನ್ನು ಯಾರೋ ಅಪಹರಣ ಮಾಡಿಕೊಂಡು ಹೊದ ಬಗ್ಗೆ ರಾಘವೇಂದ್ರ ಮಡಿವಾಳರ ಇವರು ನೀಡಿದ ದೂರಿನ ಮೇಲಿಂದ ದಿ-20.04.2024 ರಂದು ಕೊಪ್ಪಳ ಮಹಿಳಾ ಪೊಲೀಸ್‌ ಠಾಣಾ ಗುನ್ನೇ ನಂ -24/2024 0-363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕು.ಅನುಶ್ರೀ ಮಡಿವಾಳರ ವಯ:07 ವರ್ಷ ಈಕೆಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ಸಾಯಿಸಿ ಗೊಬ್ಬರ ಚೀಲದಲ್ಲಿ ಹಾಕಿ ಬಾಯಿ ಕಟ್ಟಿ ಮನೆಯ ಹಿಂದಿನ ಖಾಲಿ ಜಾಗೆಯಲ್ಲಿ ಎಸೆದು ಹೋದ ಬಗ್ಗೆ ಫಿರ್ಯಾದಿದಾರರು ಪುನಃ ಹೇಳಿಕೆ ನೀಡಿದ್ದರಿಂದ ದಿನಾಂಕ-21.04.2024 ರಂದು ಪ್ರಕರಣದಲ್ಲಿ ಕಲಂ-302, 201 ಐಪಿಸಿ ಸೇರ್ಪಡೆ ಮಾಡಿ ತನಿಖೆ ಮುಂದುವರೆಸಲಾಗಿತ್ತು.

ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರ ಸುಳಿವೆ ಇಲ್ಲದ ಪ್ರಕರಣ ಭೇದಿಸಲು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ್ರೀ ಹೇಮಂತ್‌ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ್ರೀ ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಆಂಜನೇಯ ಡಿ.ಎಸ್‌ ಪಿ.ಐ ಮಹಿಳಾ ಠಾಣೆ ಕೊಪ್ಪಳ ರವರ ನೇತೃತ್ವದಲ್ಲಿ
ಮೌನೇಶ್ವರ ಪಾಟೀಲ್ ಸಿಪಿಐ ಯಲಬುರ್ಗಾ ವೃತ್ತ, ಸುರೇಶ ಡಿ. ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ, ಡಾಕೇಶ ಪಿ.ಎಸ್‌.ಐ ಕೊಪ್ಪಳ ಗ್ರಾಮೀಣ ಠಾಣೆ ಮತ್ತು ಸಿಬ್ಬಂದಿಯವರಾದ ವೆಂಕಟೇಶ ಎಎಸ್‌ಐ, ಸಿಹೆಚ್‌ಸಿ ನಾಗರಾಜ, ಖಾಜಾಸಾಬ, ಚಂದುನಾಯಕ, ನಿಂಗಪ್ಪ ಹೆಬ್ಬಾಳ, ಮೆಹಬೂಬ, ದೇವೆಂದ್ರಪ್ಪ, ಮಹೇಶ ಸಜ್ಜನ, ಚಿರಂಜೀವಿ, ವಿಶ್ವನಾಥ, ಶಿವಕುಮಾರ ಕೊಟೇಶ, ಅಶೋಕ, ರಿಜ್ವಾನ ಮತ್ತು ಸಿಪಿಸಿ ಹನಮಗೌಡ, ಕನಕರಾಯ, ಉಮೇಶ, ಮಹ್ಮದರಫಿ, ಪ್ರಸಾದ, ಈರೇಶ, ಚಂದ್ರಶೇಖರ, ಮಲ್ಲಪ್ಪ, ಅಶ್ರಫ್ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಈ ರೀತಿಯಲ್ಲಿ ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷಿಪ್ರ
ಕಾರ್ಯಾಚರಣೆ ಕೈಗೊಂಡು ಕೊಲೆ ಮಾಡಿದ ಆಪಾದಿತರ ಸುಳಿವೇ ಇಲ್ಲದ ಮತ್ತು ಅತೀ ಸೂಕ್ಷ್ಮ
ಸ್ವರೂಪದ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ಮಾಹಿತಿಯನ್ನು ಸಂಗ್ರಹಿಸಿ ಆಪಾದಿತ ಸಿದ್ದಲಿಂಗಯ್ಯ
ತಂದೆ ಗುರುಸ್ವಾಮಿ ನಾಯ್ಕಲ್ ವಯ: 51 ವರ್ಷ, ಉ:ಮೆಕ್ಯಾನಿಕ್ ಕೆಲಸ ಸಾ: ಕಿನ್ನಾಳ ಈತನನ್ನು ಇಂದು ದಿನಾಂಕ-16.06.2024 ರಂದು ಬೆಳಗ್ಗೆ ಕಿನ್ನಾಳ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ,
ಕು.ಅನುಶ್ರೀ ಈಕೆಯು ತನಗೆ ಗುಟ್ಕಾ ತಂದು ಕೊಡಲಿಲ್ಲ ಎಂಬ ಸಿಟ್ಟಿನಿಂದ ಕೋಪಗೊಂಡು ಕೋಲಿನಿಂದ ತಲೆಗೆ
ಜೋರಾಗಿ ಹೊಡೆದು ಕೊಲೆ ಮಾಡಿರುವದಾಗಿ ತಪ್ಲೊಪ್ಪಿಕೊಂಡಿದ್ದು ಇರುತ್ತದೆ. ಆಪಾದಿತನಿಂದ ಕೃತ್ಯಕ್ಕೆ
ಉಪಯೋಗಿಸಿದ ಕಟ್ಟಿಗೆ (ಕೋಲು), ಮುಚ್ಚಿಟ್ಟಿದ್ದ ಮೃತಳ ಚಪ್ಪಲ್ ಮತ್ತು ಮೃತದೇಹದ ಚೀಲ ಕಾಣದಂತೆ
ಅಡ್ಡಲಾಗಿ ಇಟ್ಟಿದ್ದ ನೀರಿನ ಸ್ಟೀಲ್ ಟ್ಯಾಂಕ್ವ ಶಪಡಿಸಿಕೊಂಡಿದ್ದು, ಆಪಾದಿತನನ್ನು ದಸ್ತಗಿರಿ ಮಾಡಿ
ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.ಏಳು ವರ್ಷದ ಅಪ್ರಾಪ್ತ ಬಾಲಕಿ ಕೊಲೆಯಾಗಿ ಹೆಚ್ಚಿನ
ಮಟ್ಟದಲ್ಲಿ ಸುದ್ದಿಯಾಗಿದ್ದ ಮತ್ತು ಪತ್ತೆಗೆ ಸವಾಲಾತಿದ್ದ ಅತೀ ಸೂಕ್ಷ್ಮ ಕೊಲೆ ಪ್ರಕರಣವನ್ನು ಪತ್ತೆ ಮಾಡಿ
ಆಪಾದಿತನನ್ನು ಬಂಧಿಸಿ ಕೊಲೆ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್‌
ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.

error: Content is protected !!