ಗಂಗಾವತಿ: ಬಿರುಬಿಸಿಲಿನ ದಾಹ ನೀಗಿಸುವ ನೀರಿನ ಅರವಟ್ಟಿಗೆ;ನಿಟ್ಟುಸಿರು ಬಿಡುತ್ತಿರುವ ಸಾರ್ವಜನಿಕರು ನಗರದಲ್ಲಿ ದಲಿತ ಸಂಘಟನಾ  ಸಮಿತಿ (ಭೀಮ ಘರ್ಜನೆ) ವತಿಯಿಂದ  .    ನಗರದ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರವಟಿಗೆಯನ್ನು ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ . ಸಂಘಟನೆಯ ಮುಖಂಡ ಜಂಭಣ್ಣ  ನಾಯಕ ಮಾತನಾಡಿ. ಇವತ್ತಿನ ದಿನಮಾನಗಳಲ್ಲಿ ಈ ಮಾರ್ಚ್ ಏಪ್ರಿಲ್ ಮೇ ತಿಂಗಳಿನಲ್ಲಿ ಈ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಿಸಿಲು ಇರುವುದರಿಂದ ಸಾರ್ವಜನಿಕರು ನೀರಿನ ದಾಹ ತೀರಿಸಿಕೊಳ್ಳಲಿಕ್ಕೆ ಹಲವಾರು ತಂಪು ಪಾನೀಯ ಮರೆವಾಗುತ್ತಿದ್ದಾರೆ ಆ ತಂಪು ಪಾನೀಯಗಳನ್ನು ಸೇವನೆ ಮಾಡುವುದರಿಂದ ಮನುಷ್ಯನ ದೇಹಕ್ಕೆ ಅನಾರೋಗ್ಯ ತುತ್ತು ಆಗುವ ಜಾಸ್ತಿ ಇರುವುದರಿಂದ ಹಾಗಾಗಿ ಸಾರ್ವಜನಿಕರು ಎಲ್ಲಿ ಅರವಟ್ಟಿಗೆ ಕಂಡರೂ ಕೂಡ ಇಂತಹ ನೀರಿನ  ತಾವು  ಸೇವನೆ ಮಾಡುವುದು ತುಂಬಾ ಉತ್ತಮ ಮತ್ತು ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ, ಅಂಗಾಂಗ ದಾನ. ಎಷ್ಟು ಮುಖ್ಯವಾಗಿವಿಯೋ ಅಷ್ಟೇ ಧಾನಗಳಲ್ಲಿ ಶ್ರೇಷ್ಠಧಾನ ಅಂದರೆ ನೀರಿನ ದಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಮತ್ತು ನಿಮ್ಮ ನಿಮ್ಮ ಮನೆಗಳ ಮೇಲೆ ಅಥವಾ ಕಟ್ಟಿಗೆ ಮರ ಗಿಡಗಳಲ್ಲಿ ಪಕ್ಷಿಗಳ ಕುಡಿದಕ್ಕಾಗಿ ಸಣ್ಣ ಪ್ರಮಾಣದ ಬಾಟಲ್ ಗಳಲ್ಲಿ ನೀರು ತುಂಬಿ ಅವುಗಳನ್ನು ನೇತಾಕಿದರೆ ಅದರಿಂದ ಪಕ್ಷಿಗಳಿಗೆ ನೀರು ಕುಡಿಯಲಿಕ್ಕೆ ತುಂಬಾ ಸರಳವಾಗುತ್ತದೆ ಎಂದರು. ಈ ನಮ್ಮ ಸಂಘಟನೆಯ ವತಿಯಿಂದ ನಮ್ಮದಲಿತ ಸಂಘಟನಾ  ಸಮಿತಿ (  ಭೀಮ ಘರ್ಜನೆ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ಅವರಿಗೆ ಈ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭ ಮಾಡಿರುವುದು
ಜನತೆಯ ಪರವಾಗಿ ಅಭಿನಂದನೆಗಳು. ಮತ್ತು ತುಂಬಾ ಸಂತೋಷದ ವಿಷಯ ಮತ್ತು ನಗರದಲ್ಲಿ ಇನ್ನು ಹಲವಾರು ಕಡೆ ಇಂತಹ ಅರವಟ್ಟಿಗೆಯನ್ನು  ವಾರದಲ್ಲಿ ಪ್ರಾರಂಭ ಮಾಡಲು ನಾವು ತೀರ್ಮಾನಿಸಿದ್ದೇವೆ ಎಂದು ಹೇಳಿದರು.


ವಿವಿಧೆಡೆ ಗಂಗಾವತಿ ಬಸ್ಸು ನಿಲ್ದಾಣ ಮುಂಭಾಗದಲ್ಲಿ ಇರುವ ಬಸವೇಶ್ವರ ವೃತ್ತ,ಕೋರ್ಟ್‌ ಮುಂಭಾಗದಲ್ಲಿ ಸೇರಿದಂತೆ ವಿವಿಧೆಡೆ ಅರವಟ್ಟಿಗೆಗಳನ್ನು ಇಡಲಾಗಿದೆ. ಹೇಳಿದರು.

ಈ ಸಂದರ್ಭದಲ್ಲಿ ದಲಿತ ಸಂಘಟನಾ ಸಮಿತಿ (ಭೀಮ ಘರ್ಜನೆ) ತಾಲೂಕು ಅಧ್ಯಕ್ಷ ಸುರೇಶ ಮಾಳೇಮನಿ,ಸಂಘಟನೆ ಪದಾಧಿಕಾರಿಗಳಾದ ಡಿ.ರಮೇಶ,,ಪರಶುರಾಮ ನಾಯಕ,ವೆಂಕಟೇಶ ಉಪ್ಪಾರ,ಮುತ್ತುರಾಜ ಅಮರಾವತಿ, ಯಮನಪ್ಪ,ಸೇರಿದಂತೆ ಇತರರು ಇದ್ದರು

error: Content is protected !!