ಗಂಗಾವತಿ : ಕೇಂದ್ರ ಸರ್ಕಾರ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಲೋಕಸಭಾ ಚುನಾವಣಾ-24 ಸಂಬಂಧಿಸಿದಂತೆ ನೀತಿಸಂಹಿತೆ ಜಾರಿ ಮಾಡಿದೆ. ನಗರದಿಂದ ಮಹರಾಷ್ಟ್ರದ ಕೊಲ್ಲಾಪುರಕ್ಕೆ ತೆರಳುವ ಸರ್ಕಾರಿ ಬಸ್ ಹಿಂಬಾಗ ಸರ್ಕಾರಿ ಪ್ರಾಯೋಜಿತ ಜಾಹೀರಾತು ಫಲಕ ತೆರವು ಮಾಡದೇ ನೀತಿಸಂಹಿತೆ ಉಲ್ಲಂಘನೆ ಮಾಡಿದ ಘಟನೆ ಜರುಗಿದೆ.
ಸರ್ಕಾರ ಸಂಪುಟದ ಯಾರೇ ಆಗಲಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಸರ್ಕಾರಿ ವಾಹನ ಅಥವಾ ಇನ್ನಾವುದೇ ಸವಲತ್ತುಗಳನ್ನು ಬಳಸಬಾರದು. ಸರ್ಕಾರಿ ಹಣದಲ್ಲಿ ಪ್ರಿಂಟ್, ಮುದ್ರಣ ಮಾಧ್ಯಮಗಳಲ್ಲಾಗಲೀ ಜಾಹೀರಾತು ನೀಡುವಂತಿಲ್ಲ. ಪೋಸ್ಟರ್, ಕಟೌಟ್, ಬಂಟಿಗ್‌ಗಳನ್ನು ಬಳಸುವ ಆಗಿಲ್ಲ.
ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಈ ಸಮಯದಿಂದಲೇ ಅಧಿಕಾರದಲ್ಲಿರುವ ಸರ್ಕಾರ ತನ್ನ ಅಧಿಕಾರ ಕಳೆದುಕೊಳ್ಳುತ್ತದೆ. ಅದರೆ ಕೆಎಸ್‌ಆರ್ಟಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ಘಟಕ ಜಾಹೀರಾತು ತೆರವು ಮಾಡದೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದರ ವಿರುದ್ದ ಚುನಾವಣೆ ಆಯೋಗ ಯಾವ ರೀತಿ ಕ್ರಮ ಕೈಗೊಳ್ಳುವುದು ಕಾದು ನೋಡ ಬೇಕಾಗಿದೆ.