ಗಂಗಾವತಿ 18:- ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರಡ್ಡಿ ಇವರು ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಏಪ್ರಿಲ್ ತಿಂಗಳಲ್ಲಿ ಅವರ ಮನೆ ಮುಂದೆ ಬೇಡಿಕೆ ಕುರಿತು ಸ್ಪಂದಿಸುವವರೆಗೂ ಪ್ರತಿ ದಿನ ಎರಡು ಗಂಟೆ ಭಜನೆ ಮಾಡುವ ವಿನೂತನ ಧರಣಿ ಹಮ್ಮಿಕೊಳ್ಳಲಾಗುವದು ಎಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಎಚ್ಚರಿಕೆ ನೀಡಿದ್ದಾರೆ.ಶಾಸಕರು ಗಂಗಾವತಿ ಅಭಿವೃದ್ಧಿ ಮಾಡಲು ಬ್ರಹತ್ ಕನಸು ಕಟ್ಟಿಕೊಂಡಿದ್ದಾಗಿ ಮಾದ್ಯಮದಲ್ಲಿ ಕಾಣುತ್ತಾ ಇದ್ದೇವೆ.ಈಗಾಗಲೇ ಏಳು ತಿಂಗಳು ಗತಿಸಿವೆ.ಅಂಜನಾದ್ರಿಗೆ 5 ಸಾವಿರ ಕೋಟಿ ಕೊಡುವದಾಗಿ ಭರವಸೆ ನೀಡಿದ್ದಾರೆ. ಡಬಲ್ ಬೆಡ್ ರೂಮ್ ಕಟ್ಟಿಸುತ್ತೇನೆ ಎಂದಿದ್ದರೂ ಯಾವುದೇ ಸುದ್ದಿ ಇದುವರೆಗೂ ಸದ್ದು ಮಾಡಿರುವುದಿಲ್ಲಾ .
ಆನೆಗುಂದಿ ಉತ್ಸವ ಆಚರಿಸುತ್ತಿರುವ ಬಗ್ಗೆ ಹೇಳಿರುವದಕ್ಕೆ ಅಭಿನಂದನೆಗಳನ್ನು ಮ್ಯಾಗಳಮನಿ ಸಲ್ಲಿಸಿ ದ್ದಾರೆ. ನಗರದ ಬೈ ಪಾಸ್ ಆಗಲೀಕರಣ ಮಾಡಲಿ ಅದ್ಕಕಿಂತ ಮುಂಚಿತವಾಗಿ ವಾಗಿ ರಸ್ತೆಯ ಪಕ್ಕದಲ್ಲಿ ಇರುವ ಕಟ್ಟಡಗಳ ಮಾಲೀಕರೊಂದಿಗೆ ಚರ್ಚೆ ಮಾಡಿ ಸರಳ ರೀತಿಯಲ್ಲಿ ಕಾಮಗಾರಿ ಮಾಡಬೇಕು.
ಅಭಿವೃದ್ಧಿಗೆ ಯಾರು ಅಡ್ಡ ಪಡಿಸಲ್ಲ. ಮಾಡುವ ರೀತಿ ಸರಿಯಾಗಿರಬೇಕೇ ಹೊರತು ವಿವಾದ ಸೃಷ್ಟಿಸುವದು ಸಲ್ಲದು. ಯಾರು ಏನೇ ಮಾಡಲಿ ನಾನು ಯಾವ ಒತ್ತಡಕ್ಕೂ ಮನಿಯಲ್ಲ ಎನ್ನುವ ಹೇಳಿಕೆ ನೀಡುವ ಬದಲು ಸಭೆ ಕರೆದು ಮನವೊಲಿಸಬೇಕಿತ್ತು.ನಗರದ ಒಳ ರಸ್ತೆಗಳ ಬಗ್ಗಯೂಸಹ ಗಮನಹರಿ ಸಬೇಕಿದೆ. ಟ್ರಾಫಿಕ್ ಕಿರಿ ಕಿರಿ ಅತಿಯಾಗುತ್ತಿದೆ. ಇವು ಎಲ್ಲವುಗಳಿಗಿಂತ ನಮ್ಮ ಬೇಡಿಕೆಗಳು ಬಹಳ ಪ್ರಾಮುಖ್ಯತೆ ಹೊಂದಿವೆ.
31 ನೇ ವಾರ್ಡಿನಲ್ಲಿ ಟೆಂಟ್ ಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ ಬದುಕುತ್ತಿರುವ ಅಲೆಮಾರಿಗಳಿಗೆ ವಸತಿ ಕಲ್ಪಿಸುವದು, ಖಾಸಗಿ ಕಟ್ಟಡದಲ್ಲಿನಡೆಯುವ ಸರಕಾರಿ ಕಚೇರಿ ಗಳನ್ನು ಖಾಲಿ ಇರುವ ಸರಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಿ ಸರಕಾರಕ್ಕೆ ಆಗುವ ನಷ್ಟ ತಪ್ಪಿಸಬೇಕು, ಹಾಗೂ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಗುಂಡಮ್ಮ ಕ್ಯಾಪ್ ನಲ್ಲಿ ಇರುವ ಸಿಟಿ ಮಾರ್ಕೆಟ್ ಪ್ರಾರಂಭ ಮಾಡಿ ಇಲ್ಲಿನ ಜನತೆಗೆ ಅನುಕೂಲ ಲ್ಪಿಸುವದರ ಜೊತೆಗೆ ನಗರಸಭೆಗೆ ಆದಾಯ ಬರುವಂತೆ ಮಾಡುವದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಅನೇಕ ತಿಂಗಳುಗಳ ಹಿಂದೆಯೇ ಮನವಿ ಸಲ್ಲಿಸಿದೆ, ಹೋರಾಟ, ಸತ್ಯಾಗ್ರಹ ಮಾಡಿದರೂ ನಮ್ಮ ಬೇಡಿಕೆಗಳ ಬಗ್ಗೆ ಇದುವರೆಗೂ ಸ್ಪಂದಿಸದೆ ತಾತ್ಸಾರ ಭಾವನೆ ಹೊಂದಿದ್ದಾರೆ.
ಬಹಳ ನಿರ್ಲಕ್ಷ ಮಾಡಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ ಸಮಯವಿದೆ . ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವಷ್ಟರಲ್ಲಿ ಈಡೇರಿಸಲು ಬಯಸುತ್ತೇನೆ. ಇಲ್ಲದೇ ಹೋದರೆ ಏಪ್ರಿಲ್ ತಿಂಗಳಲ್ಲಿ ಶಾಸಕರ ಮನೆ ಮುಂದೆ ಬೇಡಿಕೆಗಳ ಬಗ್ಗೆ ಸ್ಪಂದಿಸುವವರೆಗೂ ಪ್ರತಿ ದಿನ ಎರಡು ಗಂಟೆ ಭಜನೆ ಮಾಡುವ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಮ್ಯಾಗಳಮನಿ ಪ್ರಕಟಣೆ ಮೂಲಕ ಶಾಸಕರಿಗೆ ಒತ್ತಾಯಿಸಿದ್ದಾರೆ.