ಕೋಪ್ಪಳ : ನಾರಾಯಣ ಪೇಟ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದನ್ನು ತೆರವುಗೊಳಿಸುವಂತೆ ಅದೇಶಿಸಿದ್ದರು, ಕಟ್ಟಡ ತೆರವಾಗಿಲ್ಲ, ಇದರ ಹಿಂದೆ ಡಿಸಿ ಕೈವಾಡವಿದೆ ಎಂದು ಕೊಪ್ಪಳ ಡಿಸಿ ನಳಿನ್ ಅತುಲ್ ವಿರುದ್ಧ ಸಿಬಿಐಗೆ ದೂರು ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿಯಿಂದ ಸಿಬಿಐಗೆ ನಳಿನ್ ಅತುಲ್ ವಿರುದ್ಧ ದೂರು ದಾಖಲಾಗಿದೆ.ರೆಸಾರ್ಟ್ಗಳಿಂದ ಅರಣ್ಯ ಕಂದಾಯ ಭೂಮಿ ಒತ್ತುವರಿ ಮಾಡಲಾಗಿದೆ. ನೂರು ಎಕರೆಗೂ ಹೆಚ್ಚು ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ. ನೀರು ನಾಯಿ ಸಂರಕ್ಷಣಾ ಪ್ರದೇಶದಲ್ಲಿನ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಭೂಮಿ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಿಸಿದ ಆರೋಪ 2023 ಡಿಸೆಂಬರ್ 2018 ರಂದು ಒತ್ತುವರಿ ತೆರವಿಗೆ ಡಿಸಿ ಆದೇಶಿಸಿದ್ದಾರೆ. ಆದರೆ ಎರಡು ತಿಂಗಳಾದರೂ ಇದುವರೆಗೂ ಕೂಡ ಅಕ್ರಮ ಕಟ್ಟಡ ತೆರವಾಗಿಲ್ಲ ಡಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದರೆ. ರೆಸಾರ್ಟ್ ಮಾಲೀಕರ ಜೊತೆ ಕೈಜೋಡಿಸಿದ್ದಾರೆಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿಯ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಇದೀಗ ದಿನೇಶ್ ಕಲ್ಲಳ್ಳಿ ದೂರು ಸಲ್ಲಿಸಿದ್ದಾರೆ. ಒತ್ತುವರಿ ತೆರವುಗೊಳಿಸಿದ ಆರೋಪದ ಅಡಿ ಕೊಪ್ಪಳ ಡಿಸಿ ನಳೀನ್ ಅತುಲ್ ವಿರುದ್ಧ ದೂರು ಸಲ್ಲಿಕೆಯಾಗಿದೆ.